ಬೆಂಗಳೂರು: ಬೆಂಗಳೂರು ಸ್ಲೀಪರ್ ಸೆಲ್, ಉಗ್ರರ ಅಡಗುದಾಣವಾಗಿ ಮುಂದುವರಿದಿದೆಯಾ ಎಂಬ ಆತಂಕ ಮುಂದುವರಿದಿದೆ.
Advertisement
ಲಷ್ಕರ್ ಉಗ್ರ ಸಂಘಟನೆಯ ಅಸ್ಸಾಂ ಮೂಲದ ಶಂಕಿತ ಅಖ್ತರ್ ಹುಸೇನ್‍ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡವೊಂದರ 3ನೇ ಮಹಡಿಯ ಕೋಣೆಯಲ್ಲಿ ವಾಸವಾಗಿದ್ದ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ರಾತ್ರಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ
Advertisement
Advertisement
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೆಲ ಯುವಕರೊಂದಿಗೆ ಶಂಕಿತ ಉಗ್ರ ಅಖ್ತರ್ ಹುಸೇನ್ ವಾಸ್ತವ್ಯ ಹೂಡಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿಯ 30ಕ್ಕೂ ಹೆಚ್ಚು ಪೊಲೀಸರು ರೇಡ್ ಮಾಡಿ ಲಷ್ಕರ್ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಗಡಿ ಬಳಿ ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕುತ್ತಿದೆ ಚೀನಾ