ಬೆಂಗಳೂರು: ನಗರದಲ್ಲಿ (Bengaluru) ಬಂಧಿಸಿರುವ ಶಂಕಿತ ಭಯೋತ್ಪಾದಕರಿಂದ (Suspected Terrorist) ವಶಪಡಿಸಿಕೊಳ್ಳಲಾದ ಗ್ರೆನೇಡ್‍ಗಳ ಪರಿಶೀಲನೆಗಾಗಿ ದೇಶದ ಬೇರೆಡೆ ಪತ್ತೆಯಾದ ಗ್ರೆನೇಡ್‍ಗಳ ಮಾಹಿತಿಯನ್ನು ಸಿಸಿಬಿ (CCB) ಕಲೆ ಹಾಕಿದೆ. ಗ್ರೆನೇಡ್ (Grenade) ಮೇಲಿದ್ದ ಮೇಡ್ ಇನ್ ವಿವರವನ್ನೇ ಆರೋಪಿಗಳು ಅಳಿಸಿ ಹಾಕಿದ್ದಾರೆ. ಇದರಿಂದಾಗಿ ಬೇರೆಡೆ ಪತ್ತೆಯಾದ ಸ್ಫೋಟಕಗಳ ಮಾದರಿ ಆಧರಿಸಿ ಗ್ರೆನೇಡ್‍ಗಳ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ.
ಗ್ರೆನೇಡ್ ತಯಾರಾದ ಸ್ಥಳ ಹಾಗೂ ಇನ್ನಿತರ ಮಾಹಿತಿಯನ್ನು ಅಳಿಸಿ ಹಾಕಲಾಗಿದೆ. ಇದರಿಂದಾಗಿ ಗ್ರೆನೇಡ್ ಮಾದರಿ ಹಾಗೂ ಅದಕ್ಕೆ ಬಳಕೆಯಾದ ವಸ್ತುಗಳ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ. ಈ ಸಲುವಾಗಿ ನಗರದಲ್ಲಿ 2007ರಲ್ಲಿ ಪತ್ತೆಯಾದ ಗ್ರೆನೇಡ್ ಫೋಟೊಗಳು ಹಾಗೂ ಅದರ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಕಳೆದ ವರ್ಷ ಹೈದರಾಬಾದ್‍ನಲ್ಲಿ ಪತ್ತೆಯಾಗಿದ್ದ 4 ಗ್ರೆನೇಡ್‍ಗಳ ಮಾದರಿ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಇದನ್ನೂ ಓದಿ: ಶಂಕಿತ ಉಗ್ರರು ಬೆಂಗ್ಳೂರಲ್ಲೇ ಅಡಗಿಸಿಟ್ಟಿದ್ದ ಗ್ರೆನೇಡ್‌ಗಳು ಪತ್ತೆ
- Advertisement
ಗ್ರೆನೇಡ್ ತಯಾರಿಕೆಯ ವಿವರ, ತಯಾರಾದ ಸ್ಥಳ ಹಾಗೂ ಯಾವಾಗ ಅಲ್ಲಿಂದ ತರಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಹಿಂದೆ ಪತ್ತೆಯಾಗಿದ್ದ ಗ್ರೆನೇಡ್ ಕೇಸ್ ಫೈಲ್‍ಗಳನ್ನು ತರಿಸಿಕೊಂಡು ಸಾಮ್ಯತೆ ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಗ್ರೆನೇಡ್‍ಗಳನ್ನು ಹೈ ಕ್ವಾಲಿಟಿ ಕಂಪನಿ ತಯಾರಿಸಿರುವ ಶಂಕೆ ವ್ಯಕ್ತವಾಗಿದೆ. ಎಫ್‍ಎಸ್‍ಎಲ್‍ನಿಂದ ಜೀವಂತ ಗ್ರೆನೇಡ್‍ಗಳು ವಾಪಸ್ ಆಗಿದ್ದು, ಸಿಸಿಬಿ ವಿಶೇಷ ತಂಡ ತನಿಖೆಯನ್ನು ಚುರುಕುಗೊಳಿಸಿದೆ.ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 125 ರೋಗಿಗಳ ಸ್ಥಳಾಂತರ
- Advertisement
Web Stories