ಬೆಂಗಳೂರು: ಬ್ಲ್ಯಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಿಮ್ಮಿ ರಾಹುಲ್ ಮತ್ತು ಅಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ 28 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಒಂದು ಕೋಟಿಗೆ ಮೂವತ್ತು ಲಕ್ಷ ಕಮಿಷನ್ ಆಧಾರದ ಮೇಲೆ ಹಣ ಬದಲಾವಣೆ ಮಾಡುತ್ತಿದ್ದರು. ಒಟ್ಟು 53 ಲಕ್ಷ ರೂ. ಮೌಲ್ಯದ ಒಂದು ಸಾವಿರ ರೂಪಾಯಿಯ ನೋಟುಗಳು ವಶಪಡಿಸಿಕೊಳ್ಳಲಾಗಿದೆ. ಉಳಿದವು 500 ರೂಪಾಯಿಯ ನೋಟುಗಳಾಗಿದೆ.
Advertisement
ಜಿಮ್ಮಿ ರಾಹುಲ್ ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು, ಅಜಯ್ ಮೂಲತಃ ಕೊಡಗು ನಿವಾಸಿಯಾಗಿದ್ದಾನೆ. ಇವರಿಬ್ಬರು ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಅಕ್ರಮವಾಗಿ ಹಳೆಯ ನೋಟುಗಳಿಗೆ ಸೈಟ್ ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿದ್ದ ಇವರು ಸ್ಥಳೀಯವಾಗಿ ಹಣ ಬದಲಾವಣೆ ಮಾಡಲು ಹೋಗಿ ಮೂರು ಬಾರಿ ಪೊಲೀಸರಿಂದ ಪರಾರಿಯಾಗಿದ್ದರು.
Advertisement
ಬೆಂಗಳೂರಲ್ಲಿ ಸುಲಭವಾಗಿ ಹಣ ಬದಲಾವಣೆ ಮಾಡಬಹುದು ಎಂದು ತಿಳಿದು ನಗರಕ್ಕೆ ಬಂದಿದ್ದರು. ಚೀಟಿಂಗ್ ಗ್ಯಾಂಗ್ ನ ಜೊತೆ ಹಣ ಬದಲಾವಣೆ ಮಾಡುವುದಕ್ಕೆ ನಗರಕ್ಕೆ ಬಂದಿದ್ದರು. ಇವರ ಬಳಿ ಹಣ ಇದೆ ಎನ್ನುವ ಖಚಿತ ಮಾಹಿತಿಯನ್ನು ಆಧಾರಿಸಿ ಸಿಸಿಸಿ ಪೊಲೀಸರು ಇಂದು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.