ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲಪಡಿಸಲು ಹೊರಟಿದ್ದ ಜಿಹಾದಿ ಗ್ಯಾಂಗನ್ನು ಮೊಬೈಲ್ ಸಿಮ್ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ದಕ್ಷಿಣ ಭಾರತದ ಐಸಿಸ್ ಕಮಾಂಡರ್ ಮೆಹಬೂಬ್ ಪಾಷಾನನ್ನ ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಮತ್ತಷ್ಟು ಮಾಹಿತಿಗಳು ಹೊರಬರಲಾಭಿಸಿವೆ. 10 ಮೊಬೈಲ್ ಸಿಮ್ ಖರೀದಿಸಿರುವುದನ್ನು ಆಧರಿಸಿಯೇ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಇದೀಗ ತಿಳಿದು ಬಂದಿದೆ. ಇದನ್ನೂ ಓದಿ: ಶಂಕಿತ ನಾಲ್ವರು ಉಗ್ರರು 10 ದಿನ ಸಿಸಿಬಿ ಕಸ್ಟಡಿಗೆ
Advertisement
Advertisement
2019ರ ಏಪ್ರಿಲಿನಲ್ಲಿ ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಹತ್ಯೆ ಪ್ರಕರಣದ ಆರೋಪಿ, ಜಿಹಾದಿ ಶಂಕಿತ ಉಗ್ರ ಮೊಹಿನುದ್ದೀನ್ ಖಾಜಾ ಜಾಮೀನು ಪಡೆದು ಬಂದು ತಲೆ ಮರೆಸಿಕೊಂಡಿದ್ದ. ಖಾಜಾ ಪತ್ತೆಗೆ ತಮಿಳುನಾಡು ನ್ಯಾಯಾಲಯ ಸೂಚಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆಗಳು ಎಚ್ಚೆತ್ತುಕೊಂಡಿದ್ದವು. ಸೇಲಂ ನಲ್ಲಿ ಖಾಜಾ ಶಿಷ್ಯನೊಬ್ಬ ನಕಲಿ ದಾಖಲೆ ನೀಡಿ 10 ಸಿಮ್ ಖರೀದಿಸಿದ್ದ. ಈ ಸಿಮ್‍ಗಳು ಕೋಲಾರ, ಬರ್ದಾನ್ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ಪತ್ತೆ ಮಾಡಲಾಗಿತ್ತು. ಕೂಡಲೇ ಐಎಸ್‍ಡಿ ಮತ್ತು ಸಿಸಿಬಿ ಪೊಲೀಸರು ಸದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಮೆಹಬೂಬ್ ಪಾಷಾನ ಸಹಚರರನ್ನು ಬಂಧಿಸಿದ್ದರು. ಹಿಂದೂ ಮುಖಂಡ ಸುರೇಶ್ ಹತ್ಯೆ ಬಳಿಕ ಮೊಹಿನುದ್ದೀನ್ ಖಾಜಾ ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸುವ ಸಲುವಾಗಿ ಆಪ್ತರೊಬ್ಬರ ಮೂಲಕ ಮೆಹಬೂಬ್ ಪಾಷಾ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ. ಮೆಹಬೂಬ್ ಪಾಷಾನಿಗಿದ್ದ ಇಸ್ಲಾಮಿಕ್ ಸ್ಟೇಟ್ ಪರ ಒಲವು ಕಂಡು ಇಡೀ ದಕ್ಷಿಣ ಭಾರತದ ಕಮಾಂಡರ್ ಆಗಿ ಖಾಜಾನನ್ನು ನೇಮಿಸಲಾಗಿತ್ತು. ಈ ಮೂಲಕ ಯುವಕರ ಮೈಂಡ್ ವಾಶ್ ಮಾಡಿ, ತರಬೇತಿ ನೀಡುತ್ತಿದ್ದ ಪಾಶಾ, ಕೊನೆಗೆ ತನ್ನ ಅಣ್ಣನ ಮಕ್ಕಳಿಬ್ಬರಿಗೂ ಮೈಂಡ್ ವಾಶ್ ಮಾಡಿ ತರಬೇತಿ ನೀಡಲು ಮುಂದಾಗಿದ್ದ. ಬಹುದೊಡ್ಡ ಗಂಡಾಂತರ ನಡೆಯುವ ಮುನ್ನವೇ ಸಿಸಿಬಿ ಮತ್ತು ಐಎಸ್‍ಡಿ ಪೊಲೀಸರು ಉಗ್ರರನ್ನು ಬಂಧಿಸಿದ್ದಾರೆ.