ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಯಾನಕ ಸ್ಫೋಟ ನಡೆಸಲು ಸ್ಕೆಚ್ ಹಾಕಿದ್ದ ಐವರು ಶಂಕಿತ ಉಗ್ರರ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, 4 ಸಜೀವ ಗ್ರೆನೇಡ್‌ಗಳನ್ನ ಸಿಸಿಬಿ ಅಧಿಕಾರಿಗಳು (CCB Officers) ಪತ್ತೆಹಚ್ಚಿದ್ದಾರೆ.
ಬೆಂಗಳೂರಿನ (Bengaluru) ಕೋಡಿಗೆಹಳ್ಳಿಯ ಜುನೈದ್ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದ ಗ್ರೆನೇಡ್‌ಗಳನ್ನ ಸಿಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪೌಡರ್ ರೂಪದ ಕೆಮಿಕಲ್‌ನಿಂದ ಸ್ಫೋಟವಾಗದಂತೆ ಅಡಗಿಸಿಟ್ಟಿದ್ದ ನಾಲ್ಕೈದು ಗ್ರೆನೇಡ್‌ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿ, ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರರ ಬಳಿಯಿದ್ದ ವಾಕಿಟಾಕಿ ಸುತ್ತ ಅನುಮಾನ – ವಿದೇಶದಲ್ಲಿದ್ದುಕೊಂಡೇ ಲಕ್ಷ ಲಕ್ಷ ಫಂಡಿಂಗ್ ಮಾಡ್ತಿದ್ದ ಮಾಸ್ಟರ್ ಮೈಂಡ್
Advertisement
Advertisement
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ವಿದ್ವಂಸಕ ಕೃತ್ಯಗಳನ್ನ ಎಸಗಲು ಒಳಸಂಚು ನಡೆಸಿರುವುದು ಕಂಡುಬಂದಿತ್ತು. ಆರೋಪಿಗಳು ತಮ್ಮ ಕಾರ್ಯಸಾಧನೆಗಾಗಿ ಕೆಲ ವಾರಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸಲಕರಣೆಗಳನ್ನ ಸಂಗ್ರಹಿಸಿಕೊಂಡಿದ್ದರು. ಜು.19ರಂದು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ವಾರ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ತನಿಖಾಧಿಕಾರಿ ಸೇರಿ ಇಬ್ಬರು ಎಸಿಪಿ, 6 ಜನ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವಿಶೇಷ ತಂಡ ರಚಿಸಲಾಗಿದ್ದು, ತೀವ್ರಗತಿಯಲ್ಲಿ ಮುಂದುವರಿದಿದೆ ಎಂದು ಹೇಳಿದರು.
Advertisement
Advertisement
ವಿದ್ವಂಸಕ ಕೃತ್ಯ ಎಸಗಲು ಗ್ರೆನೇಡ್ ಸಂಗ್ರಹ:
ಬೆಂಗಳೂರಿನಲ್ಲಿ ದುಷ್ಕೃತ್ಯ ಎಸಗಲು ತಲೆ ಮರೆಸಿಕೊಂಡಿರುವ ಎ-2 ಆರೋಪಿ ಜುನೈದ್, ಎ-5 ಬೇರೋಬ್ಬ ವ್ಯಕ್ತಿಯ ಮೂಲಕ ಎ-5 ಆರೋಪಿ ತಬ್ರೇಜ್‌ಗೆ 4 ಹ್ಯಾಂಡ್ ಗ್ರೆನೇಡ್‌ಗಳನ್ನ ತಲುಪಿಸಿದ್ದಾನೆ. ಅವುಗಳನ್ನ ಕೋಡಿಗೆಹಳ್ಳಿಯ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಕಿçಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿದಿದೆ.
ಲೈವ್ ಗ್ರೇನೆಡ್ ಪತ್ತೆ ವಿಚಾರ ತಿಳಿದು ಇದೀಗ ಸ್ಥಳೀಯರು ಆತಂಕಗೊಂಡಿದ್ದಾರೆ. ಮನೆಯ ಸುತ್ತಮಲ್ಲಿರೋ ಜನರಲ್ಲಿ ಆತಂಕ ಶುರುವಾಗಿದ್ದು, ಅಪಾರ್ಟ್ಮೆಂಟ್‌ಗಳ ಮೇಲೆ ನಿಂತು ಗಮನಿಸುತ್ತಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರರಿಗೆ ಆಶ್ರಯ ಕೊಟ್ಟಿದ್ದವರಿಗೆ ಶುರುವಾಯ್ತು ಸಂಕಷ್ಟ – ಮಾಲೀಕರ ಮೇಲೆ ಕೇಸ್?
ಮುಂಬೈ ಮಾದರಿ ಅಟ್ಯಾಕ್‌ಗೆ ಪ್ಲ್ಯಾನ್?
ಗ್ರೆನೇಟ್ ಪತ್ತೆಯಾದ ಬೆನ್ನಲ್ಲೇ ಶಂಕಿತ ಉಗ್ರರಿಂದ ಮುಂಬೈ ದಾಳಿ ಮಾದರಿಯಲ್ಲೇ ಅಟ್ಯಾಕ್‌ಗೆ ಪ್ಲ್ಯಾನ್ ನಡೆದಿತ್ತಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿದೆ. ಕೂಮು ಸಂಘರ್ಷಕ್ಕೆ ದಾರಿ ಮಾಡಿ ಆ ಸ್ಥಳದಲ್ಲಿ ವಿದ್ವಂಸಕ ಕೃತ್ಯಗಳ ಎಸಗಲು ಪ್ಲ್ಯಾನ್ ಮಾಡಿದ್ರಾ? ಅನ್ನೋ ಪ್ರಶ್ನೆಗಳು ಮೂಡಿವೆ.
Web Stories