ಬೆಂಗಳೂರು: ನಟ ದರ್ಶನ್ ಗ್ಯಾಂಗ್‍ನಿಂದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಬಳಿಕ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಗರದ ಕುಖ್ಯಾತ ರೌಡಿಶೀಟರ್ ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್‍ಗಳ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದಾರೆ.
ನಗರದ ಕ್ರಿಮಿನಲ್‍ಗಳ ಹೆಸರಿನಲ್ಲಿ ಗ್ರೂಪ್‍ಗಳನ್ನು ಪೊಲೀಸರು ಲಿಸ್ಟ್ ಮಾಡ್ತಿದ್ದು ರೌಡಿಶೀಟರ್‍ಗಳ ಹೆಸರು ಬಳಸಿ ಹತ್ತಾರು ಫ್ಯಾನ್ ಪೇಜ್‍ಗಳು ಕ್ರಿಯೇಟ್ ಮಾಡ್ತಿರೋ ಸಹಚರರ ಬೆನ್ನುಬಿದ್ದಿದ್ದಾರೆ. ಫ್ಯಾನ್ ಪೇಜ್‍ಗಳಲ್ಲಿ ರೌಡಿಶೀಟರ್ ಗಳಿಗೆ ಬಿಲ್ಡಪ್ ಕೊಟ್ಟು ಪೋಸ್ಟ್ ಮಾಡ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಲು ಸಿಸಿಬಿ ರೌಡಿ ವಿಂಗ್ ಮುಂದಾಗಿದೆ.
ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ರೌಡಿಶೀಟರ್ ಗಳ ಫ್ಯಾನ್ ಪೇಜ್‍ಗಳು ಹೆಚ್ಚಾಗಿದ್ದು, ರೌಡಿಗಳಿಗೆ ಎನ್ ಬಾಸ್, ಎಸ್ ಬಾಸ್, ಸಿ ಬಾಸ್ ಅಂತ ಪೇಜ್ ಕ್ರಿಯೇಟ್ ಮಾಡಿದ್ದಾರೆ. ಕುಖ್ಯಾತ ರೌಡಿಶೀಟರ್ ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನಿಲ, ಸೈಕಲ್ ರವಿ ಸೇರಿದಂತೆ ಹಲವರ ಹೆಸರಲ್ಲಿರೋ ಫ್ಯಾನ್ ಪೇಜ್‍ಗಳು ಓಪನ್ ಮಾಡಿದ್ದು ಇಂತಹ ಪೇಜ್‍ಗಳನ್ನ ಸಾವಿರಾರು ಯುವಕರು ಫಾಲೋ ಮಾಡ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಗ್ಯಾಂಗ್ ಕ್ರೌರ್ಯ ಮತ್ತಷ್ಟು ಬಯಲು- ಸ್ವಾಮಿಗೆ ಶೆಡ್‍ನಲ್ಲಿ ಊಟ ಕೊಟ್ಟು ಹಲ್ಲೆ
ಬೆಂಗಳೂರು ಡಾನ್, ಅಂಡರ್ ವರ್ಲ್ಡ್ ಡಾನ್, ಅಂತ ಬಿಲ್ಡಪ್ ಕೊಟ್ಟು ಪೇಜ್‍ನಲ್ಲಿ ಪೋಸ್ಟ್ ಮಾಡ್ತಿದ್ದು ಇಂತಹ ಪೇಜ್‍ಗಳಿಂದಾಗಿ ಯುವಜನತೆ ರೌಡಿಸಂ ನತ್ತ ಆಕರ್ಷಿತರಾಗ್ತಿದ್ದಾರೆ. ಈ ಬಗ್ಗೆ ಸಿಸಿಬಿಗೆ ಹಲವು ದೂರುಗಳು ಬಂದಿದ್ದು, ಸೈಬರ್ ಕ್ರೈಂ ಪೊಲೀಸರ ಸಹಾಯದೊಂದಿಗೆ ಫ್ಯಾನ್ ಪೇಜ್‍ಗಳು, ಗ್ರೂಪ್‍ಗಳನ್ನು ಡಿಲೀಟ್ ಮಾಡಿಸಲಾಗುತ್ತಿದೆ.