ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿಗಳಿಗೆಲ್ಲ ಸಿಸಿಬಿ ಪೊಲೀಸರು ಪರೇಡ್ ಮಾಡಿದ್ದಾರೆ.
ಸೈಲೆಂಟ್ ಸುನೀಲ, ಕುಣಿಗಲ್ ಗಿರಿ, ಪಪ್ಪು, ಒಂಟೆ ರೋಹಿತಾ, ಗುಜುರಿ ಅಸೀಫ್, ದಡಿಯಾ ಮಹೇಶ್, ರಾಬ್ರಿ ಗಿರಿ ಸೇರಿ ಕುಖ್ಯಾತರಿಗೆಲ್ಲಾ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ಜೊತೆಗೆ ಕುಖ್ಯಾತ ಹಳೆ ಪಂಟರ್ ತನ್ವೀರ್ ಸೇರಿ 300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ ಮಾಡಲಾಗಿದೆ.
Advertisement
Advertisement
ಇದೇ ವೇಳೆ ಸೈಲೆಂಟ್ ಸುನೀಲ ಹಾಗೂ ಕುಣಿಗಲ್ ಗಿರಿಗೆ ಡಿಸಿಪಿ ಗಿರೀಶ್ ಅವರು ಬೆಂಡೆತ್ತಿದ್ದಾರೆ. ಫೇಮಸ್ ಆಗೋಕೆ ಹೊರಟಿದ್ದೀಯಾ?, ಮದುವೆ ಆಗಿದೆಯಾ ನಿಂಗೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇಲ್ಲ ಸರ್ ಮದುವೆ ಆಗಿಲ್ಲ. ಈಗ ಹುಡುಗಿ ಹುಡುಕುತ್ತಿದ್ದಾರೆ. ನನಗೆ 31 ವಯಸ್ಸು ಆಗಿದೆ ಎಂದು ಕುಣಿಗಲ್ ಗಿರಿ ಹೇಳಿದ್ದಾನೆ.
Advertisement
ಆಗ ಡಿಸಿಪಿ ಗಿರೀಶ್ ಅವರು, ನೀನು ಮದುವೆಯಾಗೋಕೆ ಹೋಗಬೇಡ. ಜಾಸ್ತಿ ದಿನ ಉಳಿಯುವುದಿಲ್ಲ ನೀನು. ನಿನ್ನ ಆಟಗಳು ಗೊತ್ತಿಲ್ಲ ಎಂದು ಆರಾಮಾಗಿದ್ಯಾ? ನಿನ್ನ ಕಳ್ಳಾಟಗಳು ಎಲ್ಲವೂ ಗೊತ್ತಿದೆ. ಮುಂದೆ ಇದೆ ನಿಂಗೆ, ಪರೇಡ್ ಮುಗಿದ ಮೇಲೆ ನೀನು ಇಲ್ಲೇ ಇರು ಎಂದು ವಾರ್ನ್ ಮಾಡಿದ್ದಾರೆ.
Advertisement
ಇತ್ತ ಸೈಲೆಂಟ್ ಸುನೀಲಗೂ ಮಾತಲ್ಲೇ ಬೆಂಡೆತ್ತಿದ್ದಾರೆ. ಕುಣಿಗಲ್ ಗಿರಿ ಹಾಗೂ ಸೈಲೆಂಟ್ ಸುನೀಲನಿಗೆ ಅಲೋಕ್ ಕುಮಾರ್ ಅವರು ತೀವ್ರ ತರಾಟೆಗೆ ತೆಗೆದುಕೊಂಡ್ರು. ಆದರೆ ಬೈಯುತ್ತಿದ್ದರೂ ಸುನೀಲ, ಅಲೋಕ್ ಕುಮಾರ್ ಅವರನ್ನೇ ನೋಡುತ್ತಾ ನಿಂತಿದ್ದನು. ಅಷ್ಟೇ ಅಲ್ಲದೆ ಏನ್ ಮಾಡುತ್ತೀರಿ ಸರ್ ಎಂದು ಕೇಳಿದ್ದಾನೆ. ಇದರಿಂದ ಗರಂ ಆದ ಅಲೋಕ್ ಕುಮಾರ್ ಅವರು ಆತನ ಕೆನ್ನೆಗೆ ಬಾರಿಸಿ ಸಿಸಿಬಿ ಕಚೇರಿಯ ಸೆಲ್‍ಗೆ ಕರೆದುಕೊಂಡು ಹೋಗಿದ್ದಾರೆ.