ಶಿವಮೊಗ್ಗ: ಚೈತ್ರಾ ಕುಂದಾಪುರ (Chaithra Kundapura) ಟಿಕೆಟ್ ಡೀಲ್ ಪ್ರಕರಣ ಸಂಬಂಧ ಸಿಸಿಬಿ (CCB) ಪೊಲೀಸರು ಆರೋಪಿ ಗಗನ್ ಕಡೂರುನನ್ನು (Gagan Kadur) ಶಿವಮೊಗ್ಗದ (Shivamogga) ಪ್ರಮುಖ ಸ್ಥಳಗಳಿಗೆ ಕರೆತಂದು ಸ್ಥಳ ಮಹಜರ್ ನಡೆಸಿದರು.
ಸಿಸಿಬಿ ಪೊಲೀಸರು ಶಿವಮೊಗ್ಗದ ಗೌಡ ಸಾರಸ್ವತ ಕಲ್ಯಾಣ ಮಂದಿರ ಹಾಗೂ ಮಥುರಾ ಸೆಂಟ್ರಲ್ ಹೋಟೆಲ್ ಬಳಿ ಹಾಗೂ ಕೆಲವು ಆಯ್ದ ಸ್ಥಳದಲ್ಲಿ ಮಹಜರ್ ನಡೆಸಿದ್ದಾರೆ. ಇದನ್ನೂ ಓದಿ: ಬರ್ಮುಡಾ, ಟೀ ಶರ್ಟ್‍ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ!
ಪ್ರಕರಣದ ಆರೋಪಿ ಗಗನ್ ಕಡೂರು, ಶಿವಮೊಗ್ಗದಲ್ಲಿ ಉದ್ಯಮಿಯಿಂದ 50 ಲಕ್ಷ ರೂ.ಗಳನ್ನು ಪಡೆದು ಚೈತ್ರಾಳಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಹೊರಬಿದ್ದಿತ್ತು. ಅಲ್ಲದೇ ಎಫ್‌ಐಆರ್‌ನಲ್ಲಿಯೂ (FIR) ದಾಖಲಾಗಿತ್ತು. ಇದನ್ನೂ ಓದಿ: ವೇಷ ಬದಲಿಸಿ ರೈಲಿನಲ್ಲಿ ಪ್ರಯಾಣ- ಹಾಲಶ್ರೀ ಸಿಕ್ಕಿಬಿದ್ದಿದ್ದು ಹೇಗೆ?
ಈ ಹಿನ್ನೆಲೆ ಸ್ಥಳ ಮಹಜರ್‌ಗಾಗಿ ಸಿಸಿಬಿ ಇನ್ಸ್ಪೆಕ್ಟರ್ ಭರತ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ತಂಡ ಶಿವಮೊಗ್ಗ ನಗರಕ್ಕೆ ಆರೋಪಿಯನ್ನು ಕರೆತಂದು ಸ್ಥಳ ಮಹಜರ್ ನಡೆಸಿದೆ. ಸ್ಥಳದಲ್ಲಿ ಆರೋಪಿ ಗಗನ್ ಕಡೂರ್‌ನನ್ನು ನಿಲ್ಲಿಸಿ ಪೋಟೋ ತೆಗೆದುಕೊಂಡು ಪೊಲೀಸರು ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]