ಬೆಂಗಳೂರು: ವಯಸ್ಸಾಯಿತು ಎಂದು ಮಕ್ಕಳು ತಂದೆ ತಾಯಿಯನ್ನು ಹೊರ ಹಾಕುತ್ತಾರೆ. ಮಕ್ಕಳಿಲ್ಲದವರು ಅಸಹಾಯಕತೆಯಿಂದ ಕಷ್ಟಪಟ್ಟು ಜೀವನ ಮಾಡುತ್ತಾರೆ. ಅಂತಹವರಿಗೆ ಸಹಾಯವಾಗಲಿ ಎಂದು ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. 65ಕ್ಕೂ ಹೆಚ್ಚು ವಯಸ್ಸಾದವರಿಗೆ ವೃದ್ಧಾಪ್ಯವೇತನ (Old Age Scheme) ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇಂತಹ ಯೋಜನೆಗಳ ಮೇಲೆ ಇದೀಗ ವಂಚಕರು ಕಣ್ಣು ಹಾಕಿದ್ದಾರೆ.
ಆಧಾರ್ ಕಾರ್ಡ್‌ಗಳನ್ನು (Adhar Card) ನಕಲಿ ಮಾಡುವ ಮೂಲಕ ಕಿರಿಯ ವಯಸ್ಕರಿಗೆ ವೃದ್ಧಾಪ್ಯವೇತನ ಬರುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡುತ್ತಿದ್ದ ಕಡೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ರಾಜಾಜಿನಗರ (Rajajinagar), ಕೆಂಗೇರಿ (Kengeri) ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯಾದ ಕೃತ್ಯ ಎಸಗುತ್ತಿದ್ದ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಆರೋಪಿ ಚತುರ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯುಗಾದಿ ಮುನ್ನಾ ದಿನವೇ 2 ಜೀವ ಬಲಿ – ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಸಾವು
Advertisement
Advertisement
ಜನರಿಂದ ಜನರನ್ನು ಸಂಪರ್ಕಿಸಿ ವಂಚನೆಗಿಳಿಯುತ್ತಿದ್ದ ಆರೋಪಿಗಳು, 200ಕ್ಕೂ ಹೆಚ್ಚು ಜನರಿಗೆ ಈ ಯೋಜನೆಯಿಂದ ಹಣ ಬರುವಂತೆ ಮಾಡಿದ್ದಾರೆ. 35 ರಿಂದ 65ವರ್ಷದೊಳಗಿನ ಹಲವರಿಗೆ ವೃದ್ಧಾಪ್ಯವೇತನ ಬರುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಅವರಿಂದ ಹೆಚ್ಚಿನ ಹಣ ಪಡೆದು ಆಧಾರ್‌ಕಾರ್ಡ್ ಪೋರ್ಜರಿ ಮಾಡುತ್ತಿದ್ದ ಏಜೆಂಟ್‌ಗಳು (Agent) ಆಧಾರ್ ಕಾರ್ಡಿನಲ್ಲಿ ಹುಟ್ಟಿದ ದಿನಾಂಕವನ್ನು ಬದಲಿಸುತ್ತಿದ್ದರು. 65ಕ್ಕೂ ಹೆಚ್ಚು ವಯಸ್ಸು ಬರುವ ರೀತಿ ಹುಟ್ಟಿದ ದಿನಾಂಕವನ್ನು ನಮೂದಿಸಿ ವೃದ್ಧಾಪ್ಯವೇತನಕ್ಕೆ ಅರ್ಜಿ ಹಾಕಿಸುತ್ತಿದ್ದರು. ನಂತರ ಕೆಲವು ಕಂದಾಯ ಅಧಿಕಾರಿಗಳು (Revenue Officer) ಮತ್ತು ಗ್ರಾಮಲೆಕ್ಕಿಗರ (Village Accountant) ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ಚಿಂಚನಸೂರ್ ರಾಜೀನಾಮೆ ನೀಡಿದ್ಯಾಕೆ?
Advertisement
ಈ ಬಗ್ಗೆ ಮಾಹಿತಿ ಬಂದಿದ್ದೇ ತಡ ಮೂರು ಕಡೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಮುಖ್ಯ ಏಜೆಂಟ್ ಚತುರ್ ಎಂಬಾತನನ್ನು ಬಂಧಿಸಿ ಕೆಲವು ದಾಖಲೆಗಳು, ನಕಲಿ ಆಧಾರ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ತನಿಖೆ ಮುಂದುವರೆಸಿರುವ ಸಿಸಿಬಿ, ಇದರಲ್ಲಿ ಯಾವೆಲ್ಲಾ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ? ನಗರದ ಎಲ್ಲೆಲ್ಲಿ ಇದೇ ರೀತಿಯಾದ ಕೃತ್ಯಗಳು ನಡೆದಿದೆ ಎನ್ನುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಫಾಕ್ಸ್‌ಕಾನ್ ಸೇರಿದಂತೆ 18 ಹೂಡಿಕೆ ಪ್ರಸ್ತಾವನೆಗಳಿಗೆ ಎಸ್‌ಹೆಚ್ಎಲ್‌ಸಿಸಿ ಸಭೆಯಲ್ಲಿ ಅನುಮೋದನೆ
Advertisement