ಕಲಬುರಗಿ: ಸಿಸಿ ರೋಡ್ ವಿಚಾರವಾಗಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕಮಿಷನ್ ಪಡೆದ ಬೆನ್ನಲ್ಲೇ ಇದೀಗ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಸಿಸಿ ರೋಡ್ ವಿಚಾರವಾಗಿ ಅಧಿಕಾರಿಗಳು ಕಮೀಷನ್‌ಗೆ ಬೇಡಿಕೆಯಿಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನಂಗೆ 5 ಪರ್ಸೆಂಟ್ ಪಿಡಿಓಗೆ 3 ಪರ್ಸೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ 5 ಪರ್ಸೆಂಟ್ ಕಮಿಷನ್ ಕೊಡಬೇಕು ಎಂದು ಜೆಇ ಹೇಳುತ್ತಿರುವುದು ಕಂಡು ಬಂದಿದೆ. ಈ ಮೂಲಕ ಗ್ರಾಮ ಪಂಚಾಯತ್‌ನ 15ನೇ ಹಣಕಾಸಿನ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿಯ ಸಿಸಿ ರಸ್ತೆ ಮಾಡಿ, ಅದರ ಬಿಲ್ ರಿಲೀಸ್ ಗುತ್ತಿಗೆದಾರರಿಂದ ಪಂಚಾಯತ್ ರಾಜ್ ಜೆಇ 13% ಕಮಿಷನ್ ಕೇಳಿರುವುದು ಬಯಲಾಗಿದೆ.ಇದನ್ನೂ ಓದಿ: ಅಂತರಿಕ್ಷದಲ್ಲಿ ಮೊಳಕೆಯೊಡೆದ ಮೆಂತ್ಯೆ, ಹೆಸರುಕಾಳು – ಭಾರತದ ಶುಭಾಂಶು ಶುಕ್ಲಾ ಪ್ರಯೋಗ ಸಕ್ಸಸ್
ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಇಬ್ಬರು ಅಧಿಕಾರಿಗಳಾದ ಜೆಇ ಶ್ರೀಪಾದ್ ಕುಲಕರ್ಣಿ ಹಾಗೂ ಗುಂಡಗುರ್ತಿ ಗ್ರಾಮ ಪಂಚಾಯತ್ ಪಿಡಿಓ ಮಂಜುಶ್ರೀಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಸಿಸಿ ರೋಡ್ ಕಮಿಷನ್ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಬಂದಿತ್ತು. ಈಗಾಗಲೇ ಅವರನ್ನ ಅಮಾನತು ಮಾಡಲಾಗಿದೆ. ಜೊತೆಗೆ ತನಿಖೆಗೆ ವಹಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ ಹೀಗೆ ಆದ್ರೆ ನಮಗೂ ಮುಜುಗರ ಆಗುತ್ತದೆ. ಅದಕ್ಕೆ ತನಿಖೆಗೆ ಆದೇಶ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್ ಈಗ 106 ಕೋಟಿ ರೂ. ಒಡೆಯ