ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯತ್ವ ನೋಂದಣಿ ಹೆಚ್ಚು ಮಾಡಿದರೆ ಕಾರ್ಯಕರ್ತರಿಗೆ ಗಿಫ್ಟ್ ಆಫರ್ ನೀಡುವ ಪರಿ ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಿರಿಯ ರಾಜಕರಾಣಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಐದು ವರ್ಷ ಆಡಳಿತ ನಡೆಸಿದವರು. ಅವರ ಯಾವುದೇ ಪ್ರಕೃತಿ ವಿಕೋಪವಿಲ್ಲದೇ ಐದು ವರ್ಷ ಆಡಳಿತ ನಡೆಸಿದ ಸುದೈವಿಗಳಾಗಿದ್ದಾರೆ. ಅವರು ಈ ರೀತಿ ಪಕ್ಷದ ಸದಸ್ಯತ್ವವನ್ನು ಮಾಡುತ್ತಿರುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವಂತದಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಯೋಜನೆಯನ್ನು ಕಂದಾಯ ಸಚಿವರಾದ ಆರ್. ಅಶೋಕ್ ಜಾರಿಗೆ ತಂದಿದ್ದಾರೆ. ರೈತರಿಗೆ ಎಲ್ಲಾ ದಾಖಲೆಗಳನ್ನು ಮನೆಗೆ ತಲುಪಿಸುವ ಮಹತ್ವ ಯೋಜನೆಯಾಗಿದೆ ಎಂದರು. ಇದನ್ನೂ ಓದಿ: ಪಿಯುಸಿ ಪರೀಕ್ಷೆ ಮುಖ್ಯವಾದರೆ ಅಂದಿನ ರೂಲ್ಸ್ ಫಾಲೋ ಮಾಡಿ: ಬಿಸಿ ನಾಗೇಶ್
Advertisement
Advertisement
ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರು, ರೈತರು ದಾಖಲೆಗಾಗಿ ಅಲೆದಾಡುವ ಪರಿಸ್ಥಿತಿ ಇರಬಾರದು. ಇಂತಹ ಯೋಜನೆಯಿಂದ ಭ್ರಷ್ಟಾಚಾರ ಕಡಿಮೆ ಆಗುತ್ತದೆ. ಪಹಣಿ, ಉತಾರ, ಹೀಗೆ ಅನೇಕ ದಾಖಲೆಗಳನ್ನು ತಲುಪಿಸುವ ಯೋಜನೆ ಜನೋಪಯೋಗಿ ಯೋಜನೆಯಾಗಿದೆ. ಇಂದು ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿಯಲ್ಲಿ ಮನೆಮನೆಗೆ ದಾಖಲೆಗಳನನ್ನು ನೀಡುತ್ತಿರುವುದು ಖುಷಿ ತಂದಿದೆ ಎಂದರು. ಇದನ್ನೂ ಓದಿ: ನಾನು ಕಿಂಗ್ ಆಗಲ್ಲ, ನನಗೆ ಕಿಂಗ್ ಮೇಕರ್ ಆಗೋಕೆ ಇಷ್ಟ: ಸಿಎಂ ಇಬ್ರಾಹಿಂ