ರಾಯಚೂರು: ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ ಎಂದು ಪೊಲೀಸ್ ಇಲಾಖೆ ರಾಯಚೂರಿನಲ್ಲಿ ನೋಟಿಸ್ ಕಳುಹಿಸಿದೆ.
Advertisement
ನಗರದಿಂದ ಕಾಣೆಯಾಗಿದ್ದ ನಾಲ್ವರು ಪಿಯುಸಿ ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ಪೊಲೀಸರ ರಕ್ಷಣೆಯಲ್ಲಿದ್ದಾರೆ. ಉದ್ಯೋಗವನ್ನು ಹುಡುಕುತ್ತ ಹೋಗಿದ್ದ ವಿದ್ಯಾರ್ಥಿನಿಯರು, ಪೋಷಕರು ಹಾಗೂ ಇಡೀ ಕಾಲೇಜನ್ನೇ ಆತಂಕದಲ್ಲಿ ದೂಡಿದ್ದರು. ಸದ್ಯ ಪ್ರಕರಣ ಸುಖಾಂತ್ಯವಾಗಿದೆ. ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ಹಳೇ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಮುಂದಾಗಿದೆ. ಎಲ್ಲೆಡೆ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲಕರು, 12 ನಾಗರಿಕರು ಮೃತ
Advertisement
Advertisement
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಹಾಗೂ ಮುಖ್ಯವಾಗಿ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿದ್ದ ಪ್ರಕರಣ ಹಿನ್ನೆಲೆ ನಗರದ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ.
Advertisement
500 ಹಾಗೂ ಅದಕ್ಕಿಂತಲೂ ಹೆಚ್ಚು ಜನ ಓಡಾಡುವ ಅಂಗಡಿಗಳು, ಧಾರ್ಮಿಕ, ಕೈಗಾರಿಕಾ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಟ್ಟಡ ಸಂಕೀರ್ಣಗಳು ಬಸ್, ರೈಲ್ವೇ ನಿಲ್ದಾಣ ಸೇರಿ ವಿವಿಧ ಸ್ಥಳಗಳಲ್ಲಿ ಅದಕ್ಕೆ ಸಂಬಂಧಪಟ್ಟವರೇ ಕ್ಯಾಮೆರಾಗಳನ್ನು ಅಳವಡಿಸಿ ನಿರ್ವಹಣೆ ಮಾಡಬೇಕು. ಕನಿಷ್ಠ 30 ದಿನಗಳವರೆಗೆ ಸಿಸಿ ಕ್ಯಾಮೆರಾ ಫೂಟೇಜ್ ಸಂರಕ್ಷಣೆ ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಸೂಚಿಸಿದ್ದಾರೆ.
ನೋಟಿಸ್ ತಲುಪಿದ ಒಂದು ವಾರದೊಳಗೆ ಸಿಸಿ ಕ್ಯಾಮೆರಾಗಳನ್ನ ಅಳವಡಿಕೆ ಮಾಡಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳು ನಡೆದರೆ ವೀಡಿಯೋ ಫೂಟೇಜ್ ಅನ್ನು ಪೊಲೀಸ್ ಇಲಾಖೆಗೆ ಸಕ್ಷಮ ಪ್ರಾಧಿಕಾರಕ್ಕೆ ಬೇಕಿದ್ದಲ್ಲಿ ನೀಡಬೇಕು ಅಂತ ನೋಟೀಸ್‍ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ