ನವದೆಹಲಿ: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿಯ ಫಲಿತಾಂಶವನ್ನು ವೆಬ್ ಸೈಟ್ ಗಳಲ್ಲಿ ಪ್ರಕಟ ಮಾಡಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಶೇ.83.01 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಶೇ.0.99 ಪ್ರಮಾಣ ಹೆಚ್ಚಿದೆ. ವಲಯಾವಾರು ವಿಭಾಗದಲ್ಲಿ ತ್ರಿವೆಂಡ್ರಮ್ ಶೇ.97.32, ಚೆನ್ನೈ ಶೇ.93.8 ಮತ್ತು ದೆಹಲಿ ಶೇ.89 ಸಾಧನೆ ಮಾಡಿದೆ. ಹುಡುಗಿಯರಲ್ಲಿ ಶೇ.88.31 ಹಾಗೂ ಹುಡುಗರಲ್ಲಿ ಶೇ.78.99 ಮಂದಿ ತೇರ್ಗಡೆಗೊಂಡಿದ್ದಾರೆ.
Advertisement
500 ಅಂಕಕ್ಕೆ 499 ಅಂಕ ಪಡೆಯುವುದರ ಮೂಲಕ ನೋಯ್ಡಾದ ಮೇಘನಾ ಶ್ರೀವಾಸ್ತವ ಟಾಪರ್ ಆಗಿದ್ದಾರೆ. ಘಜಿಯಾಬಾದ್ ಎಸ್.ಎ.ಜೆ. ಶಾಲೆಯ ಅನುಶ್ಕ ಚಂದ್ರ 498 ಅಂಕ ಪಡೆಯುವುದರ ಮೂಲಕ ಎರಡನೇ ಸ್ಥಾನವನ್ನು ಪಡೆದಿದ್ದಾರೆ. 497 ಅಂಕಗಳನ್ನು ಪಡೆಯುವುದರ ಮೂಲಕ ಮೂರನೇ ಸ್ಥಾನವನ್ನು 7 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಜೈಪುರ, ಲುಧಿಯಾನಾ, ಹರಿದ್ವಾರ, ನೋಯ್ಡಾ, ಮೀರತ್ ನಗರಗಳಿಂದ ತಲಾ ಒಬ್ಬ ವಿದ್ಯಾರ್ಥಿ, ಘಜಿಯಾಬಾದ್ ನಿಂದ ಇಬ್ಬರು ವಿದ್ಯಾರ್ಥಿಗಳು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
Advertisement
15,674 ವಿದ್ಯಾರ್ಥಿಗಳು ವಿದೇಶದಲ್ಲಿ ಪರೀಕ್ಷೆಯನ್ನು ಬರೆದಿದ್ದರು. 14,881 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಇದನ್ನೂ ಓದಿ:ಸಿಬಿಎಸ್‍ಇ 12 ನೇ ತರಗತಿಯ ಫಲಿತಾಂಶ ಶನಿವಾರ ಪ್ರಕಟ