ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ (CBI) ವಿಚಾರಣೆಗೆ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ತಮ್ಮನ್ನು ಬಂಧಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ (BJP) ಸೂಚನೆ ನೀಡಿದರೆ ಸಿಬಿಐ ನನ್ನನ್ನು ಬಂಧಿಸುವ ಸಾಧ್ಯತೆಯಿದೆ. ಕೆಲವು ಬಿಜೆಪಿ ನಾಯಕರು ನನ್ನನ್ನು ಬಂಧಿಸುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆಪ್ (AAP) ನಾಯಕ ಹೇಳಿದ್ದಾರೆ.
Advertisement
Advertisement
ಬಿಜೆಪಿಗರು ಅತ್ಯಂತ ಶಕ್ತಿಶಾಲಿಗಳು. ಅವರು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು. ಅವರು ಅಮಾಯಕರು ಎಂಬುವುದನ್ನು ಕೂಡಾ ನೋಡುವುದಿಲ್ಲ ಎಂದು ಕೇಜ್ರಿವಾಲ್ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಳೆ ಬೀದರ್‌ಗೆ ರಾಹುಲ್ ಗಾಂಧಿ ಎಂಟ್ರಿ
Advertisement
ಶುಕ್ರವಾರವೂ ಬಿಜೆಪಿಯನ್ನು ಟೀಕಿಸಿರುವ ಕೇಜ್ರಿವಾಲ್, ಮದ್ಯ ನೀತಿ ಹಗರಣ ನಡೆದಿಲ್ಲ. ಬಿಜೆಪಿಯವರು ದುರಹಂಕಾರಿಗಳು. ಅವರು ಯಾರನ್ನೂ ಅರ್ಥಮಾಡಿಕೊಳ್ಳುವುದಿಲ್ಲ. ಯಾರಿಗೆ ಬೇಕಾದರೂ ಬೆದರಿಕೆ ಹಾಕಬಲ್ಲರು. ಅವರು ನ್ಯಾಯಾಧೀಶರು, ಮಾಧ್ಯಮಗಳು ಮತ್ತು ಕೈಗಾರಿಕೋದ್ಯಮಿಗಳಿಗೂ ಬೆದರಿಕೆ ಹಾಕುತ್ತಾರೆ ಎಂದು ಹೇಳಿದ್ದಾರೆ.
Advertisement
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿಂತೆ ವಿಚಾರಣೆಗೆ ಕೇಜ್ರಿವಾಲ್ ಅವರು ಭಾನುವಾರ ಸಿಬಿಐ ಕಚೇರಿಗೆ ತೆರಳಿದ್ದಾರೆ. ಫೆಬ್ರವರಿ 26ರಂದು ಸಿಬಿಐ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದನ್ನೂ ಓದಿ: ಅತಿಕ್, ಅಶ್ರಫ್ ಹತ್ಯೆ – ಮೂವರು ಹಂತಕರ ಬಂಧನ, ಯುಪಿಯಲ್ಲಿ ಹೈ ಅಲರ್ಟ್