ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ (Delhi) ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಕೇಂದ್ರೀಯ ತನಿಖಾ ಸಂಸ್ಥೆ (CBI) ವಿಚಾರಣೆಗೆ ಕರೆಸಿದೆ. ಸಮನ್ಸ್ ಬಳಿಕ ಆಮ್ ಆದ್ಮಿ ಪಕ್ಷ (AAP), ಸಿಸೋಡಿಯಾ ಅವರನ್ನು ಬಂಧಿಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದೆ.
Advertisement
ಸಮನ್ಸ್ ಬಳಿಕ ಮಾತನಾಡಿದ ಆಪ್ ಹಿರಿಯ ನಾಯಕ ಸೌರಭ್ ಭಾರದ್ವಾಜ್ (Saurabh Bhardwaj), ಸಿಸೋಡಿಯಾ ಅವರಿಗೆ ಸಮನ್ಸ್ ನೀಡಿರುವುದರ ಹಿಂದೆ ಬಿಜೆಪಿ (BJP) ಹಾಗೂ ಆಪ್ ಪಕ್ಷ ನೇರ ಸ್ಪರ್ಧೆಯಲ್ಲಿರುವ ಗುಜರಾತ್ ಚುನಾವಣೆಗೆ (Gujarat elections) ಸಂಬಂಧವಿದೆ. ಈ ಬಗ್ಗೆ ಬಿಜೆಪಿ ಭಯ ಪಟ್ಟಿದೆ. ಇದಕ್ಕಾಗಿ ಸಿಸೋಡಿಯಾ ಅವರನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
Advertisement
मेरे घर पर 14 घंटे CBI रेड कराई, कुछ नहीं निकला. मेरा बैंक लॉकर तलाशा, उसमें कुछ नहीं निकला. मेरे गाँव में इन्हें कुछ नहीं मिला.
अब इन्होंने कल 11 बजे मुझे CBI मुख्यालय बुलाया है. मैं जाऊँगा और पूरा सहयोग करूँगा.
सत्यमेव जयते.
— Manish Sisodia (@msisodia) October 16, 2022
Advertisement
ಸಿಬಿಐ ಸಮನ್ಸ್ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಸಿಬಿಐ ನನ್ನ ಮನೆ ಮೇಲೆ 14 ಗಂಟೆಗಳ ಕಾಲ ದಾಳಿ ನಡೆಸಿತ್ತು. ನನ್ನ ಬ್ಯಾಂಕ್ ಲಾಕರ್ ಅನ್ನು ಕೂಡಾ ತೆರೆದು ಹುಡುಕಿದ್ದರು. ಆದರೆ ಎಲ್ಲೂ ಏನೂ ಅವರಿಗೆ ಸಿಕ್ಕಿರಲಿಲ್ಲ. ಈಗ ಅವರು ನಾಳೆ ಬೆಳಗ್ಗೆ ನನ್ನನ್ನು 11 ಗಂಟೆಗೆ ಸಿಬಿಐ ಕಚೇರಿಗೆ ಕರೆದಿದ್ದಾರೆ. ನಾನು ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುತ್ತೇವೆ ಎಂದ ಹೋರಾಟಗಾರಿಗೆ ಬಿಸಿ ಮುಟ್ಟಿಸಿದ ಪೊಲೀಸರು
Advertisement
जेल की सलाख़ें और फाँसी का फंदा भगत सिंह के बुलंद इरादों को डिगा नहीं पाये
ये आज़ादी की दूसरी लड़ाई है।मनीष और सत्येंद्र आज के भगत सिंह है
75 साल बाद देश को एक शिक्षा मंत्री मिला जिसने ग़रीबों को अच्छी शिक्षा देकर सुनहरे भविष्य की उम्मीद दी
करोड़ों ग़रीबों की दुआएँ आपके साथ है https://t.co/slc3lb1Mqp
— Arvind Kejriwal (@ArvindKejriwal) October 16, 2022
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಉಪನಾಯಕನಿಗೆ ಸಮನ್ಸ್ ನೀಡಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ, ಕೋಟ್ಯಂತರ ಬಡವರ ಪ್ರಾರ್ಥನೆ ನಿಮ್ಮೊಂದಿಗಿದೆ. ಜೈಲಿನ ಕಂಬಿಗಳು ಮತ್ತು ಗಲ್ಲು ಶಿಕ್ಷೆ ಭಗತ್ ಸಿಂಗ್ ಅವರ ದೃಢ ಉದ್ದೇಶವನ್ನು ತಡೆಯಲಿಲ್ಲ. ಇದು ನಮ್ಮ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದೆ. 75 ವರ್ಷಗಳ ಬಳಿಕ ದೇಶ ಉತ್ತಮ ಶಿಕ್ಷಣ ಸಚಿವರನ್ನು ಪಡೆದಿದ್ದು, ಬಡವರಿಗೆ ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ನೀಡುತ್ತಿದೆ ಎಂದು ಸಿಸೋಡಿಯಾ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ