ಕೋಲ್ಕತ್ತಾ: ಜಾನುವಾರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕ ಅನುಬ್ರತಾ ಮೊಂಡಲ್‌ಗೆ ಸಿಬಿಐ ಸಮನ್ಸ್ ನೀಡಿದೆ.
ಅನಾರೋಗ್ಯ ಕಾರಣ ನೆಪ ಹೇಳಿ ಸೋಮವಾರ ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡದೆಯೇ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ ಮೊಂಡಲ್ ಅವರನ್ನು ಬುಧವಾರ ಕೇಂದ್ರ ಏಜೆನ್ಸಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಬೋಲ್ಪುರ್‌ನಲ್ಲಿರುವ ಮೊಂಡೊಲ್ ನಿವಾಸಕ್ಕೆ ನೋಟಿಸ್ ನೀಡಲು ಸಿಬಿಐ ಅಧಿಕಾರಿಗಳು ಹೋಗಿದ್ದಾರೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್ ದಾಳಿ – ಕಂಟ್ರೋಲ್ ರೂಂಗೆ ಸಂದೇಶ
ಇಂದು ಅನುಬ್ರತಾ ಮೊಂಡಲ್‌ಗೆ ಅಗತ್ಯ ಸೂಚನೆ ನೀಡಲಾಗುವುದು. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ನಿಜಾಮ್ ಅರಮನೆ ಕಚೇರಿಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ವಿಚಾರಣೆಗೆ ಹಾಜರಾಗಲು ಆಗಸ್ಟ್ 5 ರಂದು ಟಿಎಂಸಿಯ ಬಿರ್ಭುಮ್ ಜಿಲ್ಲಾಧ್ಯಕ್ಷ ಮೊಂಡಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ವೈದ್ಯಕೀಯ ತಪಾಸಣೆಯ ಕಾರಣಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿ ಮೊಂಡೆಲ್ ಇ-ಮೇಲ್ ಮಾಡಿದ್ದರು. ಇದನ್ನೂ ಓದಿ: ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್
ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಕೆಲವು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ ನಂತರ ಮೊಂಡಲ್ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇದಾದ ಬಳಿಕ ಇಬ್ಬರು ಸಿಬಿಐ ಅಧಿಕಾರಿಗಳು ಸೋಮವಾರ ಸಂಜೆ ಮೊಂಡಲ್ ಅವರ ಚಿನಾರ್ ಪಾರ್ಕ್ ನಿವಾಸಕ್ಕೆ ಹೋಗಿದ್ದರು. ಆದರೆ ಟಿಎಂಸಿ ನಾಯಕ ಆ ಹೊತ್ತಿಗೆ ಬೋಲ್ಪುರಕ್ಕೆ ಹೋಗಿದ್ದರು.
ಮೊಂಡಲ್ ಅವರನ್ನು ಕೇಂದ್ರ ತನಿಖಾ ದಳ ಎರಡು ಬಾರಿ ಪ್ರಶ್ನಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತು. ಅವರ ಅಂಗರಕ್ಷಕ ಸೈಗಲ್ ಹುಸೇನ್‌ನನ್ನು ತನಿಖಾ ಸಂಸ್ಥೆ ಬಂಧಿಸಿದೆ.