ಸಿಬಿಐ ಪಂಜರದ ಗಿಳಿಯಾಗಬಾರದು, ಜಾಮೀನು ಸಿಕ್ಕರೂ ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ: ಸುಪ್ರೀಂ ಹೇಳಿದ್ದೇನು?

Public TV
2 Min Read
Arvind Kejriwal 1

ನವದೆಹಲಿ: ಅಬಕಾರಿ ನೀತಿಯಲ್ಲಿ ಅಕ್ರಮದ ಆರೋಪದ ಮೇಲೆ ಸಿಬಿಐನಿಂದ ಬಂಧನಕೊಳ್ಳಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಇಡಿ ಪ್ರಕರಣದಿಂದ ಜಾಮೀನು ಪಡೆದ ಹಿನ್ನೆಲೆ ಸಿಬಿಐ ಹತಾಶೆಯಿಂದ ಅವರನ್ನು ಬಂಧಿಸಿದೆ ಎಂದು ಸುಪ್ರೀಂ (Supreme Court) ಅಭಿಪ್ರಾಯಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ಶುಕ್ರವಾರ ತನ್ನ ಆದೇಶ ಪ್ರಕಟಿಸಿದೆ. ಹತ್ತು ಲಕ್ಷದ ಬಾಂಡ್ ಸಲ್ಲಿಸಬೇಕು, ಅಧೀನ ನ್ಯಾಯಲಯದ ಮುಂದೆ ವಿಚಾರಣೆಗೆ ಗೈರಾಗಬಾರದು, ಮಾಹಿತಿ ನೀಡದೇ ದೇಶ ತೊರೆಯಬಾರದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಷರತ್ತು ವಿಧಿಸಿದೆ. ಇದರ ಜೊತೆ ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವುದನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದರೂ ಸಿಬಿಐಗೆ ಎಲ್ಲೂ ಬಂಧನ ಅಗತ್ಯ ಕಾಣಲಿಲ್ಲ, ಆದರೆ ಇಡಿ ಪ್ರಕರಣದಲ್ಲಿ ಜಾಮೀನು ಪಡೆಯುತ್ತಿದ್ದಂತೆ ಸಿಬಿಐ ಸಕ್ರೀಯವಾಗಿದೆ. 22 ತಿಂಗಳು ಸುಮ್ಮನಿದ್ದ ಸಿಬಿಐ ಏಕಾಏಕಿ ಕಸ್ಟಡಿಗೆ ಕೇಳುವುದು ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಸಿಬಿಐ ಪಂಜರದ ಗಿಳಿಯಂತೆ ಕೆಲಸ ಮಾಡಬಾರದು ಎಂದು ನ್ಯಾ. ಉಜ್ಜಲ್ ಭುಯಾನ್ ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ | ಎಲ್ಲರನ್ನೂ A1 ಮಾಡಲು ಅಗುತ್ತಾ?: ಬಿಜೆಪಿ ನಾಯಕರಿಗೆ ಚಲುವರಾಯಸ್ವಾಮಿ ತಿರುಗೇಟು

ಮೊದಲ ಎಫ್‌ಐಆರ್ ಆಗಸ್ಟ್ 2022 ರಲ್ಲಿ ದಾಖಲಿಸಲಾಗಿದೆ ಮತ್ತು ನಾಲ್ಕು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಇದು ಒಳಪಟ್ಟಿದ್ದು, 17 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಶೀಘ್ರದಲ್ಲಿ ವಿಚಾರಣೆ ಅಂತ್ಯವಾಗುವ ಲಕ್ಷಣಗಳಿಲ್ಲದ ಕಾರಣ ಜಾಮೀನು ನೀಡಲಾಗುತ್ತಿದೆ. ಆದರೆ ಸಿಬಿಐ ಬಂಧನ ಕಾನೂನು ಬಾಹಿರ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾ. ಸೂರ್ಯಕಾಂತ್ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್, ಪೊಲೀಸರ ಲೋಪ ಮುಚ್ಚಿ ಹಾಕಲು ಸಿಕ್ಕ ಸಿಕ್ಕವರು ಅರೆಸ್ಟ್: ಹೆಚ್‌ಡಿಕೆ

ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ ಕಾನೂನು ಬದ್ಧತೆಯ ಬಗ್ಗೆ ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಸರ್ವಾನುಮತದಿಂದ ಜಾಮೀನು ಮಂಜೂರು ಮಾಡಿದರು. ಸಿಬಿಐ ತನ್ನ ಬಂಧನದ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಕೇಜ್ರಿವಾಲ್ ಸಲ್ಲಿಸಿದ್ದರು.

ಜಾಮೀನು ಬಳಿಕ ಕೇಜ್ರಿವಾಲ್ ಪತ್ನಿ ಸುನೀತಾ (Sunita Kejriwal) ಹರ್ಷ ವ್ಯಕ್ತಪಡಿಸಿದ್ದಾರೆ. ಆಪ್ ಕುಟುಂಬಕ್ಕೆ ಅಭಿನಂಧನೆಗಳು, ಧೈರ್ಯದಿಂದರುವುದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಮಾಜಿ ಡಿಸಿಎಂ ಮನೀಶ್ ಸಿಸೋಡಿಯ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರಷ್ಟು ಸತ್ಯ, ಪ್ರಾಮಾಣಿಕ ದೇಶಭಕ್ತ ಇನ್ನೊಬ್ಬ ರಾಜಕಾರಣಿ ಇಲ್ಲ. ಅವರನ್ನು ಬಂಧಿಸಲು ಬಿಜೆಪಿ ಸಾವಿರಾರು ಸಂಚು ರೂಪಿಸಿದೆ. ಇದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ ನಾವು ಸುಪ್ರೀಂ ಕೋರ್ಟ್, ಸಂವಿಧಾನ ಮತ್ತು ಬಾಬಾಸಾಹೇಬರಿಗೆ ಧನ್ಯವಾದ ಹೇಳುತ್ತೇವೆ ಎಂದರು. ಇದನ್ನೂ ಓದಿ: ಹಿಂದೂಗಳ ಮೇಲೆ ಕೇಸ್ | ಕರ್ನಾಟಕ, ಬಾಂಗ್ಲಾ ಸರ್ಕಾರಕ್ಕೂ ವ್ಯತ್ಯಾಸ ಏನು?: ತೇಜಸ್ವಿ ಸೂರ್ಯ ಕಿಡಿ

Share This Article