ನವದೆಹಲಿ: ಡಾರ್ಕ್‍ನೆಟ್‍ನಲ್ಲಿ (Darknet) ಯುಜಿಸಿ-ನೆಟ್ (UGC-NET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಎಫ್‍ಐಆರ್ ದಾಖಲಿಸಿದೆ.
ಯುಜಿಸಿ-ನೆಟ್ ರದ್ದುಗೊಳಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಆದೇಶಿಸಿದ ಒಂದು ದಿನದ ನಂತರ, ಸಿಬಿಐ ಗುರುವಾರ ಈ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿದೆ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆ ಕೇಂದ್ರವು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳ ಬಗ್ಗೆ ತೀವ್ರ ಗೊಂದಲದ ನಡುವೆ ಈ ಬೆಳವಣಿಗೆಯಾಗಿದೆ.
ನೀಟ್ ಹಗರಣ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆ ನಡೆಸಬೇಕೆಂಬ ಆಗ್ರಹ ಸಹ ಕೇಳಿಬರುತ್ತಿದೆ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅರೆಸ್ಟ್ ಆಗಿರುವ ಸಮಷ್ಟಿಪುರದ ವಿದ್ಯಾರ್ಥಿ ಅನುರಾಗ್ ಯಾದವ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಇದೇ ಹೊತ್ತಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್‍ಪಿನ್ ಪಾಟ್ನಾದ ಅಮಿತ್ ಆನಂದ್ ಕೂಡ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಇವರೆಡು ಈಗ ಈಗ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಬಿಹಾರ ಸರ್ಕಾರ ಎಸ್‍ಐಟಿ ರಚನೆ ಮಾಡಿತ್ತು. ತನಿಖಾ ತಂಡ ಈವರೆಗೂ 14 ಮಂದಿಯನ್ನು ಬಂಧಿಸಿದೆ. ಇದನ್ನೂ ಓದಿ: NEET Exam Row: ಉನ್ನತ ಮಟ್ಟದ ಸಮಿತಿ ರಚನೆ, ಯಾರನ್ನೂ ಬಿಡಲ್ಲ: ಧರ್ಮೇಂದ್ರ ಪ್ರಧಾನ್