ಪಾಟ್ನಾ: ಭೂ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದ (RJD) ಇಬ್ಬರು ಹಿರಿಯ ನಾಯಕರ ಮನೆಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಇಂದು ದಾಳಿ ನಡೆಸಿದೆ.
ಲಾಲು ಪ್ರಸಾದ್ ಯಾದವ್ ಯುಪಿಎ ಸರ್ಕಾರದಲ್ಲಿ ರೈಲ್ವೇ ಮಂತ್ರಿಯಾಗಿದ್ದ ವೇಳೆ ನಡೆದಿದ್ದ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿಯ ಹಿರಿಯ ನಾಯಕರಾದ ಸಂಸದ ಅಶ್ಫಾಕ್ ಕರೀಂ ಮತ್ತು ಎಂಎಲ್‍ಸಿ ಸುನಿಲ್ ಸಿಂಗ್ ಅವರ ಮನೆ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ನಡೆದಿದೆ. ಇದನ್ನೂ ಓದಿ: ವೈದ್ಯಕೀಯ ತಪಾಸಣೆಗೆ ವಿದೇಶಕ್ಕೆ ಸೋನಿಯಾ – ಸಾಥ್ ನೀಡಲಿದ್ದಾರೆ ರಾಹುಲ್, ಪ್ರಿಯಾಂಕಾ
ಎನ್‍ಡಿಎಯಿಂದ ಬೇರ್ಪಟ್ಟ ಜನತಾ ದಳ (ಯುನೈಟೆಡ್) ಆರ್‌ಜೆಡಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ ಎರಡು ವಾರಗಳ ಬಳಿಕ ಈ ದಾಳಿ ನಡೆದಿದೆ. ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರಕ್ಕೆ ನಿತೀಶ್ ಕುಮಾರ್ ಅಂತ್ಯ ಹಾಡಿ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳ ಜೊತೆ ಕೈಜೋಡಿಸಿ ಇತ್ತೀಚೆಗೆ ಬಿಹಾರದಲ್ಲಿ ಸರ್ಕಾರ ರಚಿಸಿದ್ದರು. ಆರ್‌ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಪಡಿಸಲು ನಿರ್ಧರಿಸಿದೆ. ಈ ನಡುವೆ ಸಿಬಿಐ ದಾಳಿ ಶಾಕ್ ನೀಡಿದೆ. ಇದನ್ನೂ ಓದಿ: ಗಣೇಶೋತ್ಸವ ಫ್ಲೆಕ್ಸ್‌ನಲ್ಲಿದ್ದ ಸಾವರ್ಕರ್ ಫೋಟೋ ಹರಿದುಹಾಕಿದ ಕಿಡಿಗೇಡಿಗಳು