ಬೆಂಗಳೂರು: 2020ರ ಅಕ್ಟೋಬರ್ 5ರಂದು ನಡೆದಿದ್ದ ಸಿಬಿಐ ದಾಳಿ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ವಿಜಯ್ ಮುಳಗುಂದ್‌ಗೆ ಸಿಬಿಐ ನೋಟಿಸ್ ನೀಡಿದೆ.
ಇದೇ ಆಗಸ್ಟ್ 30 ರಂದು ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ
ಡಿಕೆಶಿಗೆ ಮತ್ತೆ ಸಂಕಷ್ಟ: ಆಪ್ತನಿಗೆ ಸಿಬಿಐ ನೋಟಿಸ್ ಕೊಟ್ಟ ಬೆನ್ನಲ್ಲೇ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿದ ಕೇಸ್‌ನಲ್ಲಿ ಸಿಬಿಐಯಿಂದ ಮತ್ತೆ ಡಿಕೆಶಿಗೆ ಬುಲಾವ್ ಸಾಧ್ಯತೆಯಿದೆ
2013 ರಿಂದ 2018ರ ವರೆಗೆ ಶಾಸಕರಾಗಿದ್ದ ವೇಳೆ ಅಕ್ರಮ ಆಸ್ತಿ ಸಂಗ್ರಹಿಸಿದ್ದ ಆರೋಪದ ಮೇಲೆ 2020ರ ಅಕ್ಟೋಬರ್ 5 ರಂದು ಡಿಕೆಶಿ ಹಾಗೂ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿಯಾಗಿತ್ತು. ಡಿಎ ಕೇಸ್ ನಡಿ ಎಫ್‌ಐಆರ್ ದಾಖಲಿಸಿ ಸಿಬಿಐ ರೇಡ್ ಮಾಡಿತ್ತು. 74.93 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿತ್ತು.
2017ರ ಆಗಸ್ಟ್ 30 ರಂದು ಡಿಕೆಶಿ ಹಾಗೂ ಆಪ್ತರ ಮನೆಗಳ ಮೇಲೆ ಐಟಿ ದಾಳಿಯೂ ನಡೆದಿತ್ತು. ಐಟಿ ದಾಳಿ ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ(ಇ.ಡಿ) ಸಹ ಎಂಟ್ರಿ ಕೊಟ್ಟಿತ್ತು. ಈ ಬೆನ್ನಲ್ಲೇ ಸಿಬಿಐ ಸಹ ದಾಳಿ ನಡೆಸಿ ಡಿಕೆಶಿ 73.93 ಕೋಟಿ ಅಕ್ರಮ ಆಸ್ತಿಗಳಿಸಿದ್ದಾರೆ ಎಂದು ಕೇಸ್ ದಾಖಲಿಸಿತ್ತು. ಇದೀಗ ಹಳೆ ಕೇಸ್‌ಗೆ ಮರುಜೀವ ಕೊಡಲು ಮುಂದಾಗಿರುವ ಸಿಬಿಐ ಡಿಕೆಶಿ ಆಪ್ತ ವಿಜಯ್ ಮುಳುಗುಂದಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ – ಸುಪ್ರೀಂಗೆ ಸಮಿತಿ ವರದಿ
ಈ ಕುರಿತು ಹೇಳಿಕೆ ನೀಡಿರುವ ವಿಜಯ್ ಮುಳುಗುಂದ ಅವರು, ಇದು ಯಾವ ಪ್ರಕರಣ ಅನ್ನೋದೇ ಗೊತ್ತಿಲ್ಲ. ಸಿಬಿಐನವರಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ಈ ಹಿಂದೆ ಕರೆದಿದ್ದಾಗಲೂ ಉತ್ತರ ಕೊಟ್ಟು ಬಂದಿದ್ದೇನೆ. ಈಗ ಯಾಕೆ ಕರೆದಿದ್ದಾರೋ ಗೊತ್ತಿಲ್ಲ. ಯಾವ ಪ್ರಕರಣ ಏನೂ ಅನ್ನೋದೂ ಗೊತ್ತಿಲ್ಲ. ರಾಜಕೀಯ ಕಾರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಮ್ಮ ಅಧ್ಯಕ್ಷರಿಗೆ ತೊಂದರೆ ಕೊಡಲು ಹೀಗೆಲ್ಲಾ ಮಾಡುತ್ತಿದ್ದಾರೆ. ಧೈರ್ಯವಾಗಿ ಹೋಗುತ್ತೇನೆ, ಏನು ಕೇಳುತ್ತಾರೋ ಅದಕ್ಕೆ ಉತ್ತರ ಕೊಡುತ್ತೇನೆ. ಎಲ್ಲವನ್ನ ಎದುರಿಸುತ್ತೇವೆ ಎಂದು ಹೇಳಿದರು.