ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ (Allahabad High Court) ನಿವೃತ್ತ ನ್ಯಾಯಾಧೀಶ (Former High Court Judge) ಎಸ್‌ಎನ್ ಶುಕ್ಲಾ (SN Shukla) ಹಾಗೂ ಅವರ ಪತ್ನಿ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರ (Corruption) ಪ್ರಕರಣವನ್ನು ದಾಖಲಿಸಿದೆ.
2014 ಹಾಗೂ 2019ರ ನಡುವೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಶುಕ್ಲಾ ಅವರು ತಮ್ಮ ಆದಾಯದ ಮೂಲಕ್ಕೆ ಅನುಗುಣವಾಗಿ 2.45 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿದೆ. ಇದು ಶುಕ್ಲಾ ವಿರುದ್ಧದ 2ನೇ ಭ್ರಷ್ಟಾಚಾರ ಪ್ರಕರಣವಾಗಿದೆ. ಇದನ್ನೂ ಓದಿ: ಇದು ನನ್ನ ಕೊನೆ ಭಾಷಣ.. ಮುಂದಿನ ಅಧಿವೇಶನದಲ್ಲಿ ಸದನಕ್ಕೆ ಬರಲ್ಲ – ಗದ್ಗದಿತರಾದ ಬಿಎಸ್‌ವೈ
Advertisement
Advertisement
ಈ ಹಿಂದೆ 2029ರ ಡಿಸೆಂಬರ್ 4 ರಂದು ಪ್ರಧಾನ ತನಿಖಾ ಸಂಸ್ಥೆ ಲಕ್ನೋ ಮೂಲದ ವೈದ್ಯಕೀಯ ಕಾಲೇಜಿಗೆ ಅನುಕೂಲವಾಗುವಂತಹ ಆದೇಶವನ್ನು ನೀಡಿದಕ್ಕಾಗಿ ಎಸ್‌ಎನ್ ಶುಕ್ಲಾ ಜೊತೆಗೆ ಛತ್ತೀಸ್‌ಗಢ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಐಎಂ ಖುದ್ದುಸಿ ಹಾಗೂ ಇತರ ನಾಲ್ವರ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿತ್ತು. ಇದನ್ನೂ ಓದಿ: ಹಿಂಸಾತ್ಮಕ ರಾಜನೀತಿಯಿಂದಲೇ ಮಹಾತ್ಮ ಗಾಂಧಿ, ಇಂದಿರಾ, ರಾಜೀವ್ ಗಾಂಧಿ ಹತ್ಯೆಯಾಗಿದ್ದು: ಸುರ್ಜೆವಾಲಾ
Advertisement
ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಶುಕ್ಲಾ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ 2 ವರ್ಷಗಳಲ್ಲಿ ಲಕ್ನೋ, ಮೀರತ್ ಹಾಗೂ ದೆಹಲಿಯಲ್ಲಿನ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿತ್ತು.
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k