ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಸ್ಥರ ಅಧಿಕಾರವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಎರಡು ಸುಗ್ರೀವಾಜ್ಞೆ ತಂದಿದೆ. ಕೇಂದ್ರೀಯ ಸಂಸ್ಥೆಗಳ ಮುಖ್ಯಸ್ಥರು ಈವರೆಗೆ 2 ವರ್ಷಗಳ ಅಧಿಕಾರವಧಿ ಹೊಂದಿದ್ದರು.
Advertisement
ಕೇಂದ್ರ ಸರ್ಕಾರ ಹೊರಡಿಸಿದ ಎರಡೂ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ. ಈ ಸುಗ್ರೀವಾಜ್ಞೆ ಮೂಲಕ, ಉನ್ನತ ಸಂಸ್ಥೆಗಳ ಮುಖ್ಯಸ್ಥರು ಎರಡು ವರ್ಷ ಅಧಿಕಾರವಧಿ ಪೂರ್ಣಗೊಳಿಸಿದ ನಂತರ ಮತ್ತೆ ಮೂರು ವರ್ಷಗಳವರೆಗೆ ಅಧಿಕಾರ ವಿಸ್ತರಣೆಯಾಗಿ ಮುಂದುವರಿಯಬಹುದಾಗಿದೆ. ಇದನ್ನೂ ಓದಿ: 1ಕೋಟಿ ಮೌಲ್ಯದ ಆಸ್ತಿ ದಾನ ಕೊಟ್ಟ ಮಹಿಳೆ
Advertisement
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲ್ಎನ್ ರಾವ್ ನೇತೃತ್ವದ ಪೀಠವು, ಜಾರಿ ನಿರ್ದೇಶನಾಲಯದ ಎಸ್.ಕೆ.ಮಿಶ್ರಾ ಅವರ ಅಧಿಕಾರವಧಿಯ ವಿಸ್ತರಣೆ ಸಂಬಂಧ ತೀರ್ಪು ನೀಡಿತ್ತು. ಅಪರೂಪದ ಹಾಗೂ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಅಧಿಕಾರವಧಿ ವಿಸ್ತರಿಸಬಹುದು ಎಂದು ಪೀಠವು ಒತ್ತಿ ಹೇಳಿತ್ತು. ಇದನ್ನೂ ಓದಿ: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು