ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಭಾರತೀಯನ ಸಾವು – ಮರುದಿನವೇ ಸಿಬಿಐ ಮಹತ್ವದ ಕಾರ್ಯಾಚರಣೆ

Public TV
2 Min Read
Russia

– ಮಾನವ ಕಳ್ಳಸಾಗಣೆಯ ಬೃಹತ್‌ ಜಾಲ ಭೇದಿಸಿದ ಸಿಬಿಐ
– 7 ಮಹಾನಗರಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಾಏಕಿ ದಾಳಿ

ನವದೆಹಲಿ: ವಂಚನೆಗೊಳಗಾಗಿ ರಷ್ಯಾ ಸೇನೆಯಲ್ಲಿ (Russia Army) ಸಿಲುಕಿದ್ದ ಹೈದರಾಬಾದ್‌ ಮೂಲದ ಯುವಕ ಸಾವನ್ನಪ್ಪಿದ ಒಂದು ದಿನದ ನಂತರ ಸಿಬಿಐ (CBI) ಮಹತ್ವದ ಕಾರ್ಯಾಚರಣೆ ನಡೆಸಿದೆ. ದೇಶಾದ್ಯಂತ ಸುಮಾರು 7 ಪ್ರಮುಖ ನಗರಗಳಲ್ಲಿ 10ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಭಾರತೀಯರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Hyderabad man

ಹೆಚ್ಚಿನ ವೇತನ ನೀಡುವ ಆಸೆ ತೋರಿಸಿ, ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನೆಪದಲ್ಲಿ ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಏಜೆಂಟರಿಗೆ (Human Trafficking Agents) ಸಂಬಂಧಿಸಿದ 7 ಮಹಾನಗರಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ದೆಹಲಿ, ಮುಂಬೈ, ಚೆನ್ನೈ, ತಿರುವನಂತಪುರಂ, ಅಂಬಾಲಾ, ಚಂಡೀಗಢ ಮತ್ತು ಮಧುರೈನಲ್ಲಿ ದಾಳಿ ನಡೆಸಿದೆ. ಸಿಬಿಐ ಪ್ರಕರಣದಲ್ಲಿ ದುಬೈ ಮೂಲದ ಯೂಟ್ಯೂಬ್‌ ಬ್ಲಾಗರ್‌ ಫೈಸಲ್ ಖಾನ್ ಅಲಿಯಾಸ್ ಬಾಬಾ (Faisal Khan alias Baba) ಹೆಸರೂ ದಾಖಲಾಗಿದೆ. ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!

Stranded at warzone 4 Indians seek rescue after being duped into joining Wagner Group

ಕಳ್ಳಸಾಗಣೆ ಮಾಡುತ್ತಿದ್ದದ್ದು ಹೇಗೆ?
ಭದ್ರತಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕ ಕೆಲಸಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಅದಕ್ಕಾಗಿ ಹೆಚ್ಚಿನ ವೇತನ ನೀಡುವುದಾಗಿ ಯುವಕರಿಗೆ ಆಮಿಷ ನೀಡುತ್ತಿದ್ದರು. ನಂತರ ಅವರನ್ನು ರಷ್ಯಾ ಸೇನೆಗೆ ತಳ್ಳಿದ್ದು, ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸಿದ್ದರು. ತಮ್ಮ ಮನೆ ಮಕ್ಕಳು ನಾಪತ್ತೆಯಾದ ಬಗ್ಗೆ ಅನೇಕ ಕುಟುಂಬಗಳು ಮಾಧ್ಯಮಗಳೊಂದಿಗೆ ತಮ್ಮ ಸಂಕಷ್ಟ ಹೇಳಿಕೊಂಡಿವೆ. ಈ ವೇಳೆ ಪದೇ ಪದೇ ಫೈಸಲ್ ಖಾನ್ ಹೆಸರು ಕೇಳಿಬಂದಿದೆ. ಇದನ್ನೂ ಓದಿ: ವಂಚನೆಯಿಂದ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹೈದರಾಬಾದ್‌ ಯುವಕ – ಯುದ್ಧದಲ್ಲಿ ದುರಂತ ಸಾವು

ಈಗಾಗಲೇ ರಷ್ಯಾ ಸೇನೆಯಲ್ಲಿ ಒಂದು ಡಜನ್‌ಗೂ ಹೆಚ್ಚು ಭಾರತೀಯ ಯುವಕರು ಸಿಲುಕಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅವರನ್ನು ಕರೆತರಲು ಭಾರತೀಯ ರಾಯಭಾರ ಕಚೇರಿ ರಷ್ಯಾದ ರಕ್ಷಣಾ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ದೆಹಲಿ, ಮುಂಬೈ, ಚಂಡೀಗಢ ಮೂಲದ ಖಾಸಗಿ ಕಂಪನಿಗಳು ಭಾಗಿಯಾಗಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

Share This Article