ಬೆಂಗಳೂರು: ಡಿವೈಎಸ್‍ಪಿ ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಸಿಐಡಿಗೆ ಸಿಬಿಐ ನಿರ್ದೇಶಕರು ಪತ್ರ ಬರೆದಿದ್ದಾರೆ.
ಸಿಬಿಐ ಬರೆದಿರೋ ಈ ಪತ್ರ ಇತ್ತೀಚೆಗಷ್ಟೇ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಕೈ ಸೇರಿದೆ. ಪತ್ರದಲ್ಲಿ ಚೆನೈನ ಸಿಬಿಐ ವಿಶೇಷ ಅಪರಾಧ ವಿಭಾಗಕ್ಕೆ ಕಡತಗಳನ್ನು ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಐಡಿ ಕಡತಗಳನ್ನು ಕ್ರೂಢೀಕರಿಸಿ, ಎಂ.ಕೆ.ಗಣಪತಿ ಅವರ ಪ್ರಕರಣದ ತನಿಖಾ ವರದಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಒಂದೆರಡು ದಿನಗಳಲ್ಲಿ ಸಿಬಿಐಗೆ ಕೇಸ್ ಫೈಲ್ ಹಸ್ತಾಂತರ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ.
Advertisement
Advertisement
ಈ ಹಿಂದೆ ಸಿಐಡಿ ಪ್ರಕರಣದ ತನಿಖೆ ನಡೆಸಿ ಕೆಲವು ಮಹತ್ವದ ಸಾಕ್ಷಾಧಾರಗಳನ್ನು ವಶಕ್ಕೆ ಪಡೆದಿತ್ತು. ಈ ಪ್ರಕರಣದಲ್ಲಿ ಸಚಿವರೊಬ್ಬರು ಸೇರಿ ಐಪಿಎಸ್ ಅಧಿಕಾರಿಗಳಾದ ಆಶಿಷ್ ಮೋಹನ್ ಪ್ರಸಾದ್, ಪ್ರಣಬ್ ಮೋಹಂತಿ ಅವರೇ ನೇರ ಹೊಣೆ ಅಂತ ಗಣಪತಿ ಅವರು ಆರೋಪಿಸಿದ್ದರು. ಸಾವಿಗೂ ಮುನ್ನ ಡಿವೈಎಸ್‍ಪಿ ಗಣಪತಿ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ವೇಳೆ ಈ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಿಐಡಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಇದೀಗ ಸಿಬಿಐ ಸೂಚನೆಯಂತೆ ಮುಂದಿನ ವಾರ ಚನ್ನೈನ ಸಿಬಿಐ ಕಚೇರಿಗೆ ಸಂಬಂಧಪಟ್ಟಂತಹ ದಾಖಲೆಗಳನ್ನು ಕಳುಹಿಸಿಕೊಡಲಾಗುವುದು ಎಂದು ಸಿಐಡಿ ಡಿಜಿ ಕಿಶೋರ್ ಚಂದ್ರ ಸ್ಪಷ್ಟನೆ ನೀಡಿದ್ದಾರೆ.
Advertisement
ಇದನ್ನೂ ಓದಿ: ಗಣಪತಿ ಕೇಸ್: ಸುಪ್ರೀಂ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ಸರ್ಕಾರಿ ವಕೀಲರು ಸುಸ್ತು: ಕಲಾಪದ ಪೂರ್ಣ ವರದಿ ಇಲ್ಲಿದೆ
Advertisement
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಮಾಡುವ ವಿಚಾರವಾಗಿ ಕೆಜೆ ಜಾರ್ಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿಬಿಐ ತನಿಖೆ ಮಾಡಲಿ. ಸತ್ಯಾಂಶ ಏನೆಂದು ಹೊರಗೆ ಬರಲಿ. ಮೂರು ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಿಪೋರ್ಟ್ ಕೊಡೋಕೆ ಹೇಳಿದ್ದಾರಲ್ಲ. ಆ ಸಂದರ್ಭದಲ್ಲಿ ಸತ್ಯಾಂಶ ಏನೆಂದು ಹೊರಬರಲಿದೆ. ವರದಿ ಬಂದ ಬಳಿಕ ನಾನು ಮಾತಾನಾಡುತ್ತೇನೆ. ಇವರೇ ಆತ್ಮಹತ್ಯೆ ಮಾಡಿಸಿದ್ದಾರೆ ಅಂತ ಸುಪ್ರೀಂ ಕೋರ್ಟ್ ಹೇಳಿಲ್ಲ ಅಲ್ವಾ ಅಂತ ಹೇಳಿದ್ರು.
ಕಳೆದ ತಿಂಗಳಷ್ಟೇ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷದ ಬಳಿಕ ಫೊರೆನ್ಸಿಕ್ ಲ್ಯಾಬ್ ವರದಿ ಬಹಿರಂಗವಾಗಿತ್ತು. ಜುಲೈ 7, 2016 ರಂದು ಡಿವೈಎಸ್‍ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ರು. ಅದರೆ ಅಂದು ಗಣಪತಿ ಅವರು ಲಾಡ್ಜ್ ಗೆ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು ನಾಶವಾಗಿದೆ. ಅಂದಿನ ದೃಶ್ಯಗಳ ಬದಲಿಗೆ 1999, 2001, 2004, 2008, 2014, 2015 ರವರೆಗಿನ ಹಳೇ ವಿಡಿಯೋ ತುಂಬಿ, ಅಸಲಿ ವಿಡಿಯೋ ನಾಶ ಮಾಡಲಾಗಿದೆ ಅಂತ ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು.
ಇದನ್ನೂ ಓದಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ
ಜುಲೈ 9ರಂದು ವಿಡಿಯೋ ಸಹ ರೆರ್ಕಾಡ್ ಅಗಿದ್ದು, ಅದನ್ನ ನಾಶ ಮಾಡಲಾಗಿದೆ ಅಂತ ಫೊರೆನ್ಸಿಕ್ ಲ್ಯಾಬ್ ವರದಿಯಲ್ಲಿ ಹೇಳಲಾಗಿತ್ತು. ಡಿವಿಆರ್ ಬಳಕೆಗೆ ಯೋಗ್ಯವಾಗಿದ್ದರೂ ಅವರು ಬಂದು ಹೋಗಿರುವ ದೃಶ್ಯಗಳು ರೆಕಾರ್ಡ್ ಆಗಿಲ್ಲ. ಇದರ ಬಗ್ಗೆ ವಿನಾಯಕ ಲಾಡ್ಜ್ ಅವರನ್ನು ಸಂರ್ಕಿಸಿದಾಗ ಗಣಪತಿ ಅವರು ಮೃತಪಟ್ಟ ದಿನವೇ ಪೊಲೀಸರು ಡಿವಿಆರ್ ವಶಕ್ಕೆ ತೆಗೆದುಕೊಂಡ್ರು ಅಂತ ಹೇಳಿದ್ದರು.
ಇದನ್ನೂ ಓದಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕಂಪ್ಯೂಟರ್ ಫೈಲ್, ಫೋನ್ ಕಾಲ್ ಡಿಲೀಟ್
https://www.youtube.com/watch?v=AGmp1M_0q2s
https://www.youtube.com/watch?v=p2V1xEclj3g