ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರುಪೇಟೆಯ(ಎನ್‍ಎಸ್‍ಇ)ಯ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಭಾನುವಾರ ಸಿಬಿಐ ಬಂಧಿಸಿದೆ.
ಚಿತ್ರಾ ರಾಮಕೃಷ್ಣ ಅವರನ್ನು ನಿನ್ನೆ ದೆಹಲಿಯಲ್ಲಿ ಬಂಧಿಸಿ ನಂತರ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಸಿಬಿಐ ಕೇಂದ್ರ ಕಚೇರಿಯ ಲಾಕಪ್ ನಲ್ಲಿ ಇರಿಸಲಾಯಿತು.
Advertisement
NSE co-location scam: Former CEO Chitra Ramkrishna arrested
Read @ANI Story | https://t.co/AdVMxgiFnL#NSEcolocationscam #ChitraRamkrishna pic.twitter.com/vAloqDpr4u
— ANI Digital (@ani_digital) March 6, 2022
Advertisement
ಚಿತ್ರಾ ರಾಮಕೃಷ್ಣ ಅವರು 2013 ಮತ್ತು 2016ರ ನಡುವೆ ಎನ್‍ಎಸ್‍ಇಯ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಮಾಜಿ ಎನ್‍ಎಸ್‍ಇ ಉದ್ಯೋಗಿ ಆನಂದ್ ಸುಬ್ರಮಣ್ಯಂ ಅವರನ್ನು ಸಹ ಸಿಬಿಐ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ
Advertisement
Advertisement
ಚಿತ್ರಾ ರಾಮಕೃಷ್ಣ ಅವರು ಹಿಮಾಲಯದಲ್ಲಿ ವಾಸಿಸುವ ನಿಗೂಢ ಯೋಗಿಯೊಂದಿಗೆ ಇಮೇಲ್ ಮೂಲಕ ರಾಷ್ಟ್ರೀಯ ಸ್ಟಾಕ್ ಎಕ್ಸ್‍ಚೇಂಜ್ ಬಗ್ಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಫೆಬ್ರವರಿ 25ರಂದು ಎನ್‍ಎಸ್‍ಇಯ ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿತ್ತು.
2010 ಮತ್ತು 2015 ರ ನಡುವೆ ಎನ್‍ಎಸ್‍ಇಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೆಕ್ಯುರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಆಂತರಿಕ ತನಿಖೆ ನಡೆಸಿತ್ತು. ಇದನ್ನೂ ಓದಿ: ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು
CBI arrests former Managing Director & Chief Executive Officer of National Stock Exchange (NSE), Chitra Ramkrishna, from a location in Delhi, in connection with the co-location scam case: Sources
— ANI (@ANI) March 6, 2022
ಚಿತ್ರಾ ರಾಮಕೃಷ್ಣ ಅವರು 2014 ರಿಂದ 2016ರ ಅವಧಿಯಲ್ಲಿ ಇಮೇಲ್ ಮೂಲಕ ಪತ್ರವ್ಯವಹಾರ ಕುರಿತಂತೆ ಅಪರಿಚಿತ ವ್ಯಕ್ತಿಯೊಂದಿಗೆ ಎನ್‍ಎಸ್‍ಇಯ ಆಂತರಿಕ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಸಂಬಂಧ ಸಾಕ್ಷ್ಯಗಳು ಸಿಕ್ಕಿವೆ ಸೆಬಿ ತಿಳಿಸಿದೆ. ಚಿತ್ರಾ ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶನಿವಾರ ನ್ಯಾಯಾಲಯವು ತಿರಸ್ಕರಿಸಿತ್ತು.