ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (, Bengaluru, DK )ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕೊನೆಗೂ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.
ಕಳೆದ 17 ವರ್ಷಗಳ ಹಿಂದೆ ಬಿಬಿಎಂಪಿ ತೆಕ್ಕೆ ಸೇರಿದ್ದ 110 ಹಳ್ಳಿಗಳ ಜನರಿಗೆ ಕೊನೆಗೂ ಕಾವೇರಿ ನೀರು ಕುಡಿಯುವ ಭಾಗ್ಯ ಬಂದೊದಗಿದೆ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಸಲು ಜಲಮಂಡಳಿ ಸಜ್ಜಾಗಿದ್ದು, ಮುಂದಿನ ವಾರ ಕಾವೇರಿ 5 ಹಂತ ಯೋಜನೆಗೆ ಸರ್ಕಾರದಿಂದಲೇ ಹಸಿರು ನಿಶಾನೆ ಸಿಗಲಿದೆ.
ನಗರದ ಹೊರವಲಯದ 110 ಹಳ್ಳಿಗಳಿಗೆ ಜೂನ್ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಜಲಮಂಡಳಿ ಭರವಸೆ ನೀಡಿತ್ತು. ಆದರೆ, ಕಾಮಗಾರಿ ವಿಳಂಬ, ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಯೋಜನೆ ಪೂರ್ಣ ಆಗಿರಲಿಲ್ಲ. ಈಗ ಇದ್ದ ಅಡೆತಡೆಗಳೆಲ್ಲ ಕಳೆದಿದ್ದು ಸಮಯ ಕೂಡಿ ಬಂದಿದೆ. ಆಗಸ್ಟ್ ತಿಂಗಳು ಪೂರ್ತಿ ಟ್ರಯಲ್ ರನ್ ಮಾಡಲಾಗಿದ್ದು, 110 ಹಳ್ಳಿಗಳಿಗೆ ಅಳವಡಿಸಿರುವ ನೂರಾರು ಕಿಮೀ ಉದ್ದದ ಕೊಳವೆಗಳನ್ನು ಹಂತ ಹಂತವಾಗಿ ಪರೀಕ್ಷಿಸಲಾಗುತ್ತಿದೆ.
ಬಹುತ್ತೇಕ ಕಡೆ ಕೊಳವೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ನೀರು ಹರಿಸಲು ಯೋಗ್ಯವಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. ಹೀಗಾಗಿ ಮುಂದಿನವಾರವೇ ಯೋಜನೆ ಜಾರಿಗೊಳಿಸಲು ಜಲಮಂಡಳಿ ತಯಾರಿ ಆರಂಭಿಸಿದೆ. ಇದನ್ನೂ ಓದಿ: ಲೆಬನಾನ್ ಪೇಜರ್ ಸ್ಫೋಟದ ಹಿಂದೆ ಟ್ಯಾಲೆಂಟೆಡ್ ಬ್ಯೂಟಿ!
ಇನ್ನೂ ಜಲಮಂಡಳಿ ಯೋಜನೆ ಜಾರಿಗೆ ಸಿದ್ದವಾಗಿರೋ ಸುಳಿವು ನೀಡಿದ ಬೆನ್ನಲ್ಲೇ, ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಕಾವೇರಿ 5ನೇ ಹಂತದ ಯೋಜನೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ 5ನೇ ಹಂತದ ಯೋಜನೆಗೆ ಚಾಲನೆ ಸಿಗಲಿದೆ. ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಿಗೆ ನಿತ್ಯ 775 ಎಂಎಲ್‌ಡಿ ನೀರು ಪೂರೈಕೆಯಾಗಲಿದೆ. ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 55 ಸಾವಿರ ಸಂಪರ್ಕ ನೀಡಲಾಗಿದೆ. ಮೊದಲ ಹಂತದಲ್ಲಿ 100-200 ಎಂಎಲ್ಡಿ ನೀರು ಹರಿಸುವ ಗುರಿ ಹೊಂದಿದೆ. ಹಂತ ಹಂತವಾಗಿ ನೀರು ಪೂರೈಸುವ ಯೋಜನೆ ರೂಪಿಸಿರುವುದನ್ನು ಹೆಚ್ಚು ಮಾಡುವುದಾಗಿ ಜಲಮಂಡಳಿ ತಿಳಿಸಿದೆ. ಇದನ್ನೂ ಓದಿ: ಅರ್ಕಾವತಿ ರೀಡೂ ಪ್ರಕರಣದತ್ತ ರಾಜ್ಯಪಾಲರ ಚಿತ್ತ – ಸಿಎಂಗೆ ಮತ್ತೊಂದು ಸಂಕಷ್ಟ?
ಒಟ್ಟಾರೆ 2019ರಲ್ಲಿ ಆರಂಭಗೊಂಡ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವಾರದಿಂದ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸಲು ಸಿದ್ಧವಾಗಿದ್ದು, ಈ ಮೂಲಕ ಈ ಭಾಗದ ಜನರ ಬಹುದಿನದ ಕನಸು ಹಾಗೂ ದಾಹಕ್ಕೆ ಎರಡು ಕೂಡ ತೀರಲಿದೆ. ಇದನ್ನೂ ಓದಿ: Chhattisgarh | ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ ಮೂವರು ಸೇರಿ 8 ನಕ್ಸಲರು ಶರಣು