Connect with us

Chamarajanagar

ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ – ಮೆಟ್ಟೂರು ಜಲಾಶಯ ಭರ್ತಿ

Published

on

ಚಾಮರಾಜನಗರ: ಕಾವೇರಿ ನೀರಿಗಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡಿಗೆ ಇದೀಗ ಭರಪೂರ ನೀರು ಹರಿದಿದೆ.

ತಮಿಳುನಾಡಿನ ಮೆಟ್ಟೂರು ಜಲಾಶಯ ಎರಡು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಸಂಪೂರ್ಣ ಭರ್ತಿಯಾಗಿದ್ದು, ಈ ಮೂಲಕ ತಮಿಳುನಾಡಿನ ನೀರಿನ ದಾಹವನ್ನು ಕಾವೇರಿ ತಣಿಸಿದ್ದಾಳೆ.

Advertisement
Continue Reading Below

ಕಾವೇರಿ ಕೊಳ್ಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚು ನೀರು ಸಂಗ್ರವಾಗಿದ್ದು, ಇದರಿಂದಾಗಿ ಭಾರೀ ಪ್ರಮಾಣದ ನೀರು ಮೆಟ್ಟೂರು ಜಲಾಶಯ ತಲುಪಿದೆ. ಈ ಮೂಲಕ ನಾಲ್ಕನೇ ಬಾರಿಗೆ ಮೆಟ್ಟೂರು ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತಾಗಿದೆ.

ಮೆಟ್ಟೂರು ಜಲಾಶಯದ ಗರಿಷ್ಟ ನೀರಿನ ಮಟ್ಟ 120 ಅಡಿಯಾಗಿದ್ದು, ಇಂದಿನ ಮಟ್ಟ 120 ಅಡಿ ಇದೆ. ಈ ಮೂಲಕ ಸಂಪೂರ್ಣ ಭರ್ತಿಯಾಗಿದೆ. ಒಟ್ಟು 93.47 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ. ಪ್ರಸ್ತುತ ಒಳ ಹರಿವು 16,678 ಕ್ಯೂಸೆಕ್ ಇದ್ದು, ಹೊರ ಹರಿವು 15,600 ಸಾವಿರ ಕ್ಯೂಸೆಕ್ ಇದೆ.

Click to comment

Leave a Reply

Your email address will not be published. Required fields are marked *