ಬೆಂಗಳೂರು: ಭಾನುವಾರ ಬೆಂಗಳೂರಿನ (Bengaluru) ಅರ್ಧ ಭಾಗದಕ್ಕೆ ಕಾವೇರಿ ನೀರು (Cauvery Water) ಪೂರಕೈಯಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರಿನ 1, 2 ಮತ್ತು 3ನೇ ಹಂತದಿಂದ ನೀರು ಸರಬರಾಜು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಾಗುವುದಿಲ್ಲ.
ಪಂಪಿಂಗ್ ಸ್ಟೇಷನ್ಗಳ ತುರ್ತು ದುರಸ್ತಿ ಹಾಗೂ ಕೆಪಿಟಿಸಿಎಲ್ (KPTCL) ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ. ಇದನ್ನೂ ಓದಿ: ಮೋದಿ ಬಂದ್ಮೇಲೆ ದೇಶ ಅಭಿವೃದ್ಧಿಯಾಗಿಲ್ಲ, ನಾವು ಹುಟ್ಟುವ ಮುಂಚೆಯೇ ಆಗಿದೆ: ಹೆಚ್‌ಡಿಕೆ
Advertisement
Advertisement
ಬೆಂಗಳೂರು ಜನತೆ ಸಹಕರಿಸಬೇಕೆಂದು ಜಲಮಂಡಳಿ ಮನವಿ ಮಾಡಿದೆ. ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕಾಮಗಾರಿ ನಡೆಯುತ್ತಿರುವ ಬ್ರಿಗೇಡ್ ರಸ್ತೆಯಲ್ಲಿ ಕಳೆದ ತಿಂಗಳು ಬೃಹತ್ ಹೊಂಡ ಕಾಣಿಸಿಕೊಂಡಿತ್ತು. ಬಳಿಕ ಬಿಡಬ್ಲ್ಯುಎಸ್ಎಸ್ಬಿ ಈ ಕಾಮಗಾರಿ ಕೈಗೆತ್ತಿಕೊಂಡಿದೆ.
Advertisement
Advertisement
ಎಲ್ಲೆಲ್ಲಿ ಕಾವೇರಿ ನೀರು ಪೂರಕೈ ವ್ಯತ್ಯಯ?
ನೇತಾಜಿ ನಗರ, ಕೆಪಿ ಅಗ್ರಹಾರ, ಟಿಪ್ಪುನಗರ, ಚಾಮರಾಜಪೇಟೆ, ಆದರ್ಶ ನಗರ, ಪಾದಾರಾಯನಪುರ, ಬಿನ್ನಿ ಲೇಔಟ್, ವಿದ್ಯಾಪೀಠ, ವಿವೇಕಾನಂದ ನಗರ, ಎನ್.ಆರ್.ಕಾಲೋನಿ, ಬನಶಂಕರಿ ಮೊದಲ ಹಂತ, ಶ್ರೀನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಅಶೋಕ ನಗರ, ಶಾಂತಲಾನಗರ, ಇಸ್ರೋ ಲೇಔಟ್, ನೀಲಸಂದ್ರ, ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಶಾಂತಿನಗರ, ನೇತಾಜಿ ನಗರ, ಕೆಪಿ ಅಗ್ರಹಾರ, ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಅಂಜನಪ್ಪ ಗಾರ್ಡನ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್ ಸೇರಿದಂತೆ ಹಲವು ಕಡೆ ನೀರಿನ ಸಮಸ್ಯೆ ಉಂಟಾಗಲಿದೆ. ಇದನ್ನೂ ಓದಿ: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ: ನಳಿನ್ ಕುಮಾರ್ ಕಟೀಲ್