ಬೆಂಗಳೂರು: ಕಾವೇರಿ ನೀರು (Cauvery Water) ಬಿಡುಗಡೆ ವಿಚಾರವಾಗಿ ಚರ್ಚೆ ನಡೆಸಲು ಗುರುವಾರ ದೆಹಲಿಗೆ ಹೋಗ್ತಿದ್ದೇನೆ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ವಕೀಲರ ಭೇಟಿಗೆ ಹೋಗುತ್ತಿದ್ದೇನೆ. ಇಲಾಖೆ ಅಧಿಕಾರಿಗಳನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದೇನೆ. ಅವರು 24ಟಿಎಂಸಿ ನೀರು ಕೇಳಿದ್ರು. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡೋದಾಗಿ ಹೇಳಿದ್ವಿ. 5 ಸಾವಿರ ಕ್ಯೂಸೆಕ್ ಬಿಡುವಂತೆ ಹೇಳಿದ್ದಾರೆ. ನಾಳೆ ವಾಸ್ತವಾಂಶ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದರು. ಇದನ್ನೂ ಓದಿ: ಪಾಕಿಸ್ತಾನದ ಯಾವ ಪ್ರಧಾನಿಯೂ 5 ವರ್ಷ ಪೂರೈಸಿಲ್ಲ – ಕಾರಣಗಳೇನು?
ನೀರು ಬಿಡುವ ವಿಚಾರದಲ್ಲಿ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬೊಮ್ಮಾಯಿ ಅವರು ಏನು ಬೇಕಾದ್ರೂ ಸಲಹೆ ನೀಡಲಿ. ಲೆಕ್ಕಾಚಾರದ ಬೀಗ ನಮ್ಮ ಬಳಿ ಇದೆ. ಬೇರೆ ಯಾರಿಗೂ ಬೀಗ ಕೊಟ್ಟಿಲ್ಲ. ನಮ್ಮ ರೈತರ ಕಷ್ಟಕಾಲದಲ್ಲೂ ರಕ್ಷಣೆ ಮಾಡಬೇಕು. ನಾವು ಮೊನ್ನೆ ನಮ್ಮ ರೈತರಿಗೆ ನೀರು ಬಿಟ್ಟಿದ್ದೆವು. ಅವರು ಮಾಜಿ ಜಲಸಂಪನ್ಮೂಲ ಸಚಿವರು, ನಾಗೇಗೌಡ ಕಾಲದಲ್ಲಿ ಏನು ಮಾಡಿದ್ರು ಗೊತ್ತಿದೆ. ಎಲ್ಲವನ್ನೂ ರಾಜಕೀಯ ಮಾಡಬಾರದು ಅಂತಾ ತಿರುಗೇಟು ನೀಡಿದ್ರು.
Web Stories