ನವದೆಹಲಿ: ರಾಜ್ಯದ ಕಾವೇರಿ ಅಚ್ಚುಕಟ್ಟು ಜಲಾಶಯಗಳಿಂದ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ (Tamil Nadu) ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ (Karnataka) ಆದೇಶ ಮಾಡಿದೆ.
ಇಂದು ವರ್ಚ್ಯುವಲ್ ಸಭೆ ನಡೆಸಿದ ಸಮಿತಿ ಅಧ್ಯಕ್ಷರು ಮಳೆ ಪ್ರಮಾಣ, ಜಲಾಶಯಗಳಿಗೆ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಮಳೆಯ ಕೊರತೆಯ ಪ್ರಮಾಣ ಸರಿಯಾಗಿ ಲೆಕ್ಕ ಹಾಕಬೇಕು. ಮುಂದಿನ ಹತ್ತು ದಿನಗಳ ಕಾಲ 24,000 ಕ್ಯೂಸೆಕ್ ನೀರು ಹರಿಸಲು ತಮಿಳುನಾಡು ಒತ್ತಾಯಿಸಿತು. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಲೋಕಸಭಾ ಚುನಾವಣೆ: ಮಮತಾ ಬ್ಯಾನರ್ಜಿ ಭವಿಷ್ಯ
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ಒಳ ಹರಿವು ಇಲ್ಲದ ಕಾರಣ ನೀರು ಬಿಡಲು ಸಾಧ್ಯವಿಲ್ಲ, ತಮಿಳುನಾಡು ನೀರಾವರಿಗೆ ನೀರು ಹರಿಸಿ ಕಾವೇರಿ ಜಲಾಶಯಗಳು ಬರಿದಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿತು.
ಮಧ್ಯಪ್ರವೇಶ ಮಾಡಿದ ಸಮಿತಿ ಅಧ್ಯಕ್ಷರು ತಮಿಳುನಾಡಿನ 10 ದಿನಗಳ ಕಾಲ 24,000 ಕ್ಯೂಸೆಕ್ ಹರಿಸುವ ಬೇಡಿಕೆ ಬದಲು 7,200 ಕ್ಯೂಸೆಕ್ ಹರಿಸಲು ಹೇಳಿತು. ಇದಕ್ಕೂ ಕರ್ನಾಟಕ ಒಪ್ಪದಾಗ 5,000 ಕ್ಯೂಸೆಕ್ ಹದಿನೈದು ದಿನಗಳ ಕಾಲ ಬಿಡಲು ಶಿಫಾರಸು ಮಾಡಿತು.
ಈ ಆದೇಶ ಕರ್ನಾಟಕಕ್ಕೆ ಗಾಯದ ಮೇಲೆಬರೆ ಎಳೆದಂತಾಗಿದ್ದು ಗುರುವಾರ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಈ ಆದೇಶವನ್ನು ಪ್ರಶ್ನಿಸಲಿದ್ದು ಪ್ರಾಧಿಕಾರ ಕರ್ನಾಟಕದ ಮನವಿ ಆಲಿಸಿ ನೀರಿನ ಪ್ರಮಾಣ ಕಡಿಮೆ ಮಾಡುತ್ತಾ? ಇಲ್ವೋ ಎಂಬುದನ್ನು ಕಾದು ನೋಡಬೇಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]