ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು (TamilNadu Cauvery Water) ಹರಿಸದಂತೆ ಆಗ್ರಹಿಸಿ ಮಂಡ್ಯದಲ್ಲಿ ಆರಂಭಿಸಿರುವ ರೈತರ ಹೋರಾಟದ ಕಿಚ್ಚು ಕಟ್ಟೆಯೊಡೆದಿದೆ.
ಮಂಡ್ಯ ಬಂದ್ (Mandya Bandh) ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ರೈತರು (Farmers), ಕನ್ನಡಪರ ಹಾಗೂ ಪ್ರಗತಿ ಪರ ಸಂಘನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರೂ ಸಹ ಪ್ರತಿಭಟನೆಗೆ ಧುಮುಕಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾವೇರಿ ನದಿ ನೀರಿನ ವಿಷಯದಲ್ಲಿ ನಾವು ಮೇಲ್ಮನವಿ ಸಲ್ಲಿಸಬೇಕು: ಬಿಎಸ್‍ವೈ
ಈ ವೇಳೆ ಮಂಡ್ಯದಲ್ಲಿ ಕೆಲ ರೈತರು ತಾವೇ ಬಾಯಿಗೆ ಮಣ್ಣು ಹಾಕಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರುಬಿಟ್ಟು ರೈತರ ಬಾಯಿಗೆ ಮಣ್ಣುಹಾಕಿದೆ ಎಂದು ಹೇಳಿ ತಾವೇ ಬಾಯಿಗೆ ಮಣ್ಣು ಹಾಕಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯ, ಮದ್ದೂರ್ ಬಂದ್- ಪೊಲೀಸ್ ಬಿಗಿ ಭದ್ರತೆ
ಸಿದ್ದರಾಮಯ್ಯ (Siddaramaiah) ಬರಗಾಲದ ಸಿಎಂ, ಬರಗಾಲದ ಮುಖ್ಯಮಂತ್ರಿ ಬಂದ್ರೆ ಬರಗಾಲವೇ ಉಂಟಾಗುತ್ತೆ. ಜಲಸಂಪನ್ಮೂಲ ಸಚಿವರು ಮಂಡ್ಯ ಬಂದ್ ಮಾಡಿದ್ರೇ ಏನೂ ಆಗಲ್ಲ ಅಂತಾರೆ ಇವರಿಗೆ ಮಾನವೀಯತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ
ಸಿದ್ದರಾಮಯ್ಯ ಅವರ ಭ್ರಷ್ಟ ಸರ್ಕಾರ ರೈತರ ಬಾಯಿಗೆ ಮಣ್ಣು ಹಾಕಿದೆ. ನಾವು ಹೆಂಡತಿಯ ತಾಳಿ ಅಡವಿಟ್ಟು ಬೋರ್‌ವೆಲ್ ಕೊರೆಸಿದ್ದೇವೆ. ಆದ್ರೆ ನೀರು ಬಾರದೇ ಬೆಳೆಗಳು ಹಾಳಾಗುತ್ತಿವೆ. ಈ ಸರ್ಕಾರ ಇಡೀ ಮಂಡ್ಯ ಜಿಲ್ಲೆಯ ರೈತರು ಮಣ್ಣು ತಿನ್ನುವಂತೆ ಮಾಡಿದೆ. ಅದಕ್ಕಾಗಿ ನಾವೇ ಮಣ್ಣು ಹಾಕಿಕೊಳ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]