ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (Film Chamber) ಬೆಂಬಲ ಸೂಚಿಸಿದ್ದು, ಈ ಹೋರಾಟದಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಟ ಉಪೇಂದ್ರ (Upendra) ಮಾತನಾಡಿ, ‘ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಎಂದರೆ ಅದು ಕಾವೇರಿ ನದಿ ನೀರಿನ ಸಮಸ್ಯೆ’ ಎಂದರು.
Advertisement
ಮುಂದುವರೆದು ಮಾತನಾಡಿ ಉಪೇಂದ್ರ, ‘ನಾವೆಲ್ಲರೂ ಬುದ್ದಿವಂತರು. ವಿಚಾರ ಮಾಡುವ ಶಕ್ತಿಯಿದೆ. ಅದನ್ನು ಬಳಸಿಕೊಂಡು ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕು. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕು. ಎರಡೂ ಕಡೆಗಳಲ್ಲೂ ಈ ಕೆಲಸ ನಡೆಯಬೇಕು’ ಎಂದರು. ಇದನ್ನೂ ಓದಿ:‘ಕೆಂಡ’ದಂತಹ ಸಿನಿಮಾ ಮಾಡಿದ ಸಹದೇವ್-ರೂಪಾ ರಾವ್
Advertisement
Advertisement
ಪೂಜಾ ಗಾಂಧಿ ಹೇಳಿದ್ದೇನು?
Advertisement
ಕಾವೇರಿ ನೀರಿಗಾಗಿ (Cauvery Protest) ಕನ್ನಡಪರ ಸಂಘಟನೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಥ್ ನೀಡಿದ್ದಾರೆ. ಈ ವೇಳೆ ಪೂಜಾ ಗಾಂಧಿ (Pooja Gandhi) ಕೂಡ ಭಾಗಿಯಾಗಿ ಕನ್ನಡಿಗರ ಸಹನೆ ಮತ್ತು ತಾಳ್ಮೆಯ ಬಗ್ಗೆ ಶ್ಲಾಘಿಸಿದ್ದಾರೆ. ಕಾವೇರಿ ನಮ್ಮವಳು ಎಂದು ಹೇಳುವ ಮೂಲಕ ನಟಿ ಸಾಥ್ ನೀಡಿದ್ದಾರೆ.
ಎರಡು ರಾಜ್ಯಕ್ಕೂ ಒಳ್ಳೆಯದಾಗಲಿ. ಕನ್ನಡಿಗರಿಗೆ ನಿಜವಾಗಲೂ ಸಹನೆಯಿದೆ. ಆದರೆ ಈ ವಿಚಾರವಾಗಿ ಜಾಸ್ತಿ ಸಹನೆ ತಗೋಬೇಡಿ ಎಂದು ಕೇಳಿಕೇಳುತ್ತೇನೆ ಎಂದು ನಟಿ ಪೂಜಾ ಗಾಂಧಿ ಮಾತನಾಡಿದ್ದಾರೆ. ಇವತ್ತು ಕರ್ನಾಟಕ್ಕೆ ಯಾವು ಸಂದರ್ಭ ಕ್ರಿಯೇಟ್ ಆಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಇಬ್ಬರು ಅಹಂ ಮತ್ತು ಅಸೂಯೆ ಬಿಟ್ಟು ಕಾವೇರಿ ವಿಚಾರ ಬಗ್ಗೆ ಚರ್ಚೆ ಮಾಡಬೇಕು. ಮೇಕೆದಾಟು ಯೋಜನೆ ಬಗ್ಗೆ ಕೂಡ ಗಮನ ಕೊಡಬೇಕು.
ನಮ್ಮ ರಾಜ್ಯದ ರೈತರಿಗೆ ಏನು ಬೇಕಾದರೂ ಆಗಲಿ, ತಮಿಳುನಾಡಿನ ರೈತರು ಮಾತ್ರ ಚೆನ್ನಾಗಿ ಇರಬೇಕಾ? ಎಂದು ನಟಿ ಪೂಜಾ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕಾವೇರಿಯ ಒಂದು ಹನಿ ನೀರು ತಮಿಳುನಾಡಿಗೆ ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ. ಇಡೀ ಚಿತ್ರರಂಗ ನಮ್ಮ ಭಾಷೆ, ನೆಲ, ಜಲ ವಿಚಾರ ಬಂದಾಗ ನಮ್ಮ ಜನರಿಗೋಸ್ಕರ ಹೋರಾಟ ಮಾಡುತ್ತೇವೆ.
ಬೆಳ್ಳಿಯ ಬಾಗಿಲು ಚಿನ್ನದ ದೇಗುಲ, ಒಳಗಡೆ ಬಹು ಮುತ್ತು ರತ್ನ, ಬೀಗರ ಕೈ ತಂದು ಬಾಗಿಲನ್ನು ತೆಗೆಯಲು ನೀನು ಒಮ್ಮೆ ಮಾಡು ಪ್ರಯತ್ನ ಎಂದು ನಟಿ ಪದ್ಯ ಹೇಳಿದರು. ಎಂತಹ ಖಜಾನೆಗೂ ಒಂದು ಬೀಗದ ಕೈ ಇದ್ದೆ ಇರುತ್ತೆ, ಹಾಗೆಯೇ ಎಲ್ಲಾ ಸಮ್ಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಅದನ್ನು ನಾವು ಬಗೆಹರಿಸಬೇಕು ಎಂದು ಹೇಳುವ ಮೂಲಕ ಹೋರಾಟಕ್ಕೆ ನಟಿ ಹುರುಪು ನೀಡಿದ್ದಾರೆ. ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.
Web Stories