ಮಂಡ್ಯ: ಜಿಲ್ಲೆಯಲ್ಲಿ ನೀರಿಗಾಗಿ ಅನ್ನದಾತರ ಅಹೋರಾತ್ರಿ ಧರಣಿ ನಡೆಯುತ್ತಿದ್ದು, 8 ದಿನಗಳು ಕಳೆದಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಹೀಗಾಗಿ ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ನೀರು ಬಿಡದ ಹಿನ್ನೆಲೆಯಲ್ಲಿ ಮಂಡ್ಯದಿಂದ ಕೆಆರ್‍ಎಸ್‍ವರೆಗೆ ಜಾಥಾ ನಡೆಸಿ ಮುತ್ತಿಗೆಗೆ ಹಾಕಲು ರೈತರು ಪ್ಲಾನ್ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಗುರುವಾರ ರಾತ್ರಿ, ಕಾವೇರಿ ಜಲಾಶಯಗಳಿಂದ ನೀರು ಬಿಡಿಸುವ ಅಧಿಕಾರ ನನ್ನ ಕೈಯಲ್ಲಿ ಇಲ್ಲ. ಅದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಕೈಯಲ್ಲಿದೆ. ರೈತರು ಬೇಕಿದ್ದರೆ ದೆಹಲಿಗೆ ಹೋಗಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಿ ಎಂದು ಹೇಳಿಕೆ ನೀಡಿದ್ದರು.
Advertisement
Advertisement
ಈ ನಡುವೆ ಮಂಡ್ಯದಲ್ಲಿ ನೀರಿಗಾಗಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಕೆಆರ್‍ಎಸ್‍ವರೆಗೆ ಜಾಥಾ ನಡೆಸಿ, ಡ್ಯಾಂಗೆ ಮುತ್ತಿಗೆ ಹಾಕಲು ರೈತರು ತೀರ್ಮಾನಿಸಿದ್ದಾರೆ.
Advertisement
ಸಿಎಂ ಆಡಿದ ಮಾತುಗಳಿಂದ ನಿಖಿಲ್ ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯದಿಂದ ಸಿಎಂ ದೂರ ಆಗುತ್ತಿದ್ದಾರಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.