– ಪ್ರಾಧಿಕಾರದ ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ರಾಜ್ಯದ ಅರ್ಜಿ
ನವದೆಹಲಿ: ರಾಜ್ಯಕ್ಕೆ ಕಾವೇರಿ (Cauvery) ಸಂಕಷ್ಟ ಮುಂದುವರೆದಿದೆ. ಪ್ರಾಧಿಕಾರದ ಆದೇಶಕ್ಕೆ ತಡೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ. ಇದಕ್ಕೆ ಪ್ರತಿಯಾಗಿ ತಮಿಳುನಾಡು (Tamil Nadu) ಮತ್ತೊಂದು ಅರ್ಜಿ ಸಲ್ಲಿಸಿದೆ. ಗುರುವಾರ ಎರಡೂ ಅರ್ಜಿಗಳು ವಿಚಾರಣೆಗೆ ಬರುವ ನಿರೀಕ್ಷೆ ಇದೆ.
ಇದೆಲ್ಲದರ ನಡುವೆ ರಾಜಕೀಯವೂ ಜೋರಾಗಿದೆ. ಇಂದು ರಾಜ್ಯ ಸಂಸದರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ (CM Siddaramaiah), ಪ್ರಧಾನಿ ನರೇಂದ್ರ ಮೋದಿ (Narendra Modi) ಮಧ್ಯಪ್ರವೇಶಕ್ಕೆ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ. ಪ್ರಧಾನಿ ಭೇಟಿಗೆ ಅವಕಾಶ ಕೊಡಿಸಬೇಕು. ಪ್ರಧಾನಿ ಮಧ್ಯಪ್ರವೇಶಕ್ಕೆ ಕೇಂದ್ರ ಮಂತ್ರಿಗಳು ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಒಗ್ಗಟ್ಟು, ಸರ್ವಪಕ್ಷ ಸಂಸದರ ಬೆಂಬಲ: ಡಿಕೆಶಿ
ಇದಕ್ಕೆ ಬಿಜೆಪಿ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪದೇ ಪದೇ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತರಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಖಡಕ್ಕಾಗಿ ಸಿಎಂಗೆ ತಿಳಿಸಿದರು.
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಕಠಿಣ ಸಂದರ್ಭದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ಎಲ್ಲರೂ ಒಂದು ಧ್ವನಿ ಆಗಬೇಕು ಎಂದು ಸಂಸದರಲ್ಲಿ ಸಿಎಂ ಮನವಿ ಮಾಡಿದರು. ಸಭೆ ಬಳಿಕ ರಾಜ್ಯ ಸರ್ಕಾರದ ಡಿಎಂಕೆ ಮಾತು ಕೇಳುತ್ತಿದೆ ಎಂದು ಕೇಂದ್ರ ಮಂತ್ರಿ ಜೋಶಿ ಆಪಾದಿಸಿದರು.
ಇಷ್ಟು ದಿನ ಸಂಸದರು ನೆನಪಾಗಲಿಲ್ವಾ ಎಂದು ಡಿವಿ ಸದಾನಂದಗೌಡ ಕೆಣಕಿದರು. ಡಿಕೆ ಶಿವಕುಮಾರ್ ಮತ್ತು ಕೇಂದ್ರ ಜಲಶಕ್ತಿ ಸಚಿವರ ಭೇಟಿ ಗುರುವಾರಕ್ಕೆ ಮುಂದೂಡಿಕೆ ಆಗಿದೆ.
Web Stories