– ಸ್ವಾಮೀಜಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ
– ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಸಮಿತಿ ಸದಸ್ಯರು
ಮಡಿಕೇರಿ: ಕಾವೇರಿ ನದಿ (Cauvery River) ರಾಜ್ಯಕ್ಕೆ ಅಷ್ಟೇ ಅಲ್ಲ, ಪಕ್ಕದ ತಮಿಳುನಾಡು (TamilNadu), ಪುದುಚೇರಿಗೂ ಜೀವನದಿಯೇ ಆಗಿದೆ. ಉತ್ತರದಲ್ಲಿ ಗಂಗೆ ಎಷ್ಟು ಪವಿತ್ರಳೋ ದಕ್ಷಿಣದಲ್ಲಿ ಕಾವೇರಿ ನದಿಯೂ ಅಷ್ಟೇ ಪವಿತ್ರಳು ಎನ್ನುವ ಮಾತಿದೆ. ಈ ಕಾವೇರಿಯನ್ನು ಎರಡು ರಾಜ್ಯದ ಜನರು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಆದ್ರೆ ನೀರಿನ ಸಮಸ್ಯೆ ಬಂದ್ರೆ ಸಾಕು ಎರಡು ರಾಜ್ಯದ ಜನರು ನೀರಿಗಾಗಿ ಹೋರಾಟ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗದ ಸ್ವಾಮೀಜಿಗಳು ನಿವೃತ್ತ ನ್ಯಾಯಾಧೀಶರು ಸೇರಿ ಪಕ್ಷ ಭೇದ ಮರೆತು ʻಕಾವೇರಿ ರಕ್ಷಣಾ ಸಮಿತಿʼಯೊಂದನ್ನ ರಚಿಸಿದ್ದಾರೆ. ಈ ಮೂಲಕ ಕಾವೇರಿ ನದಿ ನೀರಿನ ಸಮಸ್ಯೆಗೆ (Cauvery River water Dispute) ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಸ್ವಾಮೀಜಿಗಳು ಮುಂದಾಗಿದ್ದಾರೆ.
Advertisement
ಹೌದು. ಕಾವೇರಿ ನದಿಯು ಕೊಡಗಿನಲ್ಲಿ ರಾಜ್ಯದ ನಾನಾ ಭಾಗಗಳಿಗೆ ಅನ್ನದಾತೆಯಾಗಿದ್ದಾಳೆ. ಅಲ್ಲದೇ ತಮಿಳುನಾಡಿನ ಜನರು ಕಾವೇರಿ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕಾವೇರಿ ನದಿಯನ್ನು ಎರಡೂ ರಾಜ್ಯದ ಜನರು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಆದ್ರೆ ಹಲವು ವರ್ಷಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ಅದರಲ್ಲೂ ಮಳೆ ಅಭಾವ ಸಂದರ್ಭದಲ್ಲಿ ಎರಡು ರಾಜ್ಯದ ಜನರ ಕಷ್ಟ ಹೇಳತ್ತೀರದಾಗಿದೆ. ಇದನ್ನೂ ಓದಿ: ಪ್ಯಾನ್ ಇಂಡಿಯಾ ರೇಡ್ – 4 ರಾಜ್ಯಗಳಲ್ಲಿ ಬಿಷ್ಣೋಯ್ ಗ್ಯಾಂಗ್‌ನ 7 ಶೂಟರ್ಸ್ ಅರೆಸ್ಟ್
Advertisement
Advertisement
ಇದೆಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂಬ ಉದ್ದೇಶದಿಂದ ಕಾವೇರಿ ನದಿ ಪಾತ್ರದ ಸ್ವಾಮೀಜಿಗಳು, ನಿವೃತ್ತ ನ್ಯಾಯಾಧೀಶರು, ವಿಧಾನಪರಿಷತ್ ಮಾಜಿ ಸದಸ್ಯರು ʻಕಾವೇರಿ ರಕ್ಷಣಾ ಸಮಿತಿʼ ರಚಿಸಿದ್ದಾರೆ. ಈ ಮೂಲಕ ಎರಡೂ ರಾಜ್ಯಗಳ ಸಮಸ್ಯೆಯನ್ನು ಹೇಗೆ ಬರಿಸುವುದು ಅನ್ನೋ ಬಗ್ಗೆ ಚಿಂತನ-ಮಂಥನ ನಡೆಸಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲರೂ ಒಟ್ಟಾಗಿ ಕಾವೇರಿ ನದಿ ಪಾತ್ರದ ಜನರು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಸ್ಪರ್ಧೆ ಮಾಡದೆ ಇದ್ದಿದ್ದರೆ ಕುಮಾರಸ್ವಾಮಿ ಮಗ ಹೆದರಿ ಓಡಿ ಹೋದ ಅಂತಿದ್ದರು: ಹೆಚ್.ಡಿ.ರೇವಣ್ಣ
Advertisement
ನಿರ್ಮಲಾನಂದನಾಥ ಸ್ವಾಮೀಜಿ, ಕಾವೇರಿ ನದಿ ಭಾಗದ ಎಲ್ಲಾ ಸ್ವಾಮೀಜಿಗಳು, ನಿವೃತ್ತ ಸಿಜೆಐ ಗೋಪಾಲ ಗೌಡ್ರು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್, ಕಾವೇರಿ ನ್ಯಾಯಾಧಿಕರಣ ವಾದ ಮಂಡಿಸಿರುವ ಹಿರಿಯ ವಕೀಲರು ಹಾಗೂ ನೀರಾವರಿ ತಜ್ಞರನ್ನು ಒಗ್ಗೂಡಿಸಿ ಚಿಂತನ-ಮಂಥನ ನಡೆಸಲಾಗುತ್ತದೆ. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಅದಕ್ಕಾಗಿ ʻಕಾವೇರಿ ರಕ್ಷಣಾ ಸಮಿತಿʼಯನ್ನು ರಚಿಸಲಾಗಿದೆ. ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಹೊರತಾಗಿ ಎಲ್ಲರನ್ನೂ, ಸಾಮಾಜಿಕ ನ್ಯಾಯದಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಕಾವೇರಿ ನದಿ ರಕ್ಷಣಾ ಸಮಿತಿ ಅದ್ಯಕ್ಷ ರಾಮು ತಿಳಿಸಿದ್ದಾರೆ.