ಮಂಡ್ಯ: ಕಾವೇರಿ (Cauvery River) ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯ (KRS Dam) ಭರ್ತಿಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ನೀರನ್ನು ಹರಿಸಿದಲ್ಲಿ, ಹೊರಹರಿವು ಹೆಚ್ಚಳವಾಗಿ ನದಿಪಾತ್ರದಲ್ಲಿ ನೆರೆ (Floods) ಉಂಟಾಗುವ ಪರಿಸ್ಥಿತಿ ಬಂದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಮಂಡ್ಯ (Mandya) ಜಿಲ್ಲಾಡಳಿತ ಸಹಾಯವಾಣಿ (Helpline) ಆರಂಭಿಸಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ – 53 ಗ್ರಾಮಗಳು ಪಾಂಡವಪುರ ತಾಲ್ಲೂಕಿನ – 15 ಗ್ರಾಮಗಳು ಮತ್ತು ಮಳವಳ್ಳಿ ತಾಲ್ಲೂಕಿನ – 21 ಗ್ರಾಮಗಳನ್ನು ಹಾಗೂ ಹೇಮಾವತಿ ಜಲಾನಯನ ಪ್ರದೇಶದ ಕೆ.ಆರ್ ಪೇಟೆ ತಾಲೂಕಿನ – 03 ಗ್ರಾಮಗಳು ಸೇರಿ ಒಟ್ಟು – 92 ಗ್ರಾಮಗಳನ್ನು ಪ್ರವಾಹ ಉಂಟಾಗುವ ಗ್ರಾಮಗಳೆಂದು ಗುರುತಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
Advertisement
ಸಹಾಯವಾಣಿ ಸಂಖ್ಯೆ:
ಜಿಲ್ಲಾಧಿಕಾರಿಗಳ ಕಚೇರಿ – 08232-224655,
ಮಂಡ್ಯ ತಾಲ್ಲೂಕು ಕಛೇರಿ – 08232-291655,
ಮದ್ದೂರು ತಾಲ್ಲೂಕು ಕಛೇರಿ – 08232-291466,
ಮಳವಳ್ಳಿ ತಾಲ್ಲೂಕು ಕಛೇರಿ – 08231-242267,
ಪಾಂಡವಪುರ ತಾಲ್ಲೂಕು ಕಛೇರಿ – 08236-255128,
ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿ – 08236-253001,
ನಾಗಮಂಗಲ ತಾಲ್ಲೂಕು ಕಛೇರಿ – 08234-298105,
ಕೆ.ಆರ್ ಪೇಟೆ ತಾಲ್ಲೂಕು ಕಛೇರಿ – 08230-262227 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
Advertisement
Advertisement
ಕಾವೇರಿ ನೀರಾವರಿ/HLBC ಸಹಾಯವಾಣಿ
ಕೆ.ಆರ್ ಸಾಗರ ಕಾರ್ಯಪಾಲಕ ಅಭಿಯಂತರರು – 08236-257976,
ಬನ್ನೂರು ಕಾರ್ಯಪಾಲಕ ಅಭಿಯಂತರರು – 9480442830,
ಮಂಡ್ಯ ಕಾರ್ಯಪಾಲಕ ಅಭಿಯಂತರರು – 9742454353,
ಕೆ.ಆರ್.ಪೇಟೆ ಹೆಚ್.ಎಲ್.ಬಿ.ಸಿ ಕಾರ್ಯಪಾಲಕ ಅಭಿಯಂತರರು – 9242229448 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
Advertisement
ಚೆಸ್ಕಾಂ ಟೋಲ್ ಫ್ರೀ ನಂಬರ್ – 1912, 9448994777/888/999,
ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಕಾರ್ಯಪಾಲಕ ಅಭಿಯಂತರರು 9448994893,
ಮಳವಳ್ಳಿ ಕಾರ್ಯಪಾಲಕ ಅಭಿಯಂತರರು – 9448994828,
ಕೆ.ಆರ್ ಪೇಟೆ ಕಾರ್ಯಪಾಲಕ ಅಭಿಯಂತರರು – 9480844740 ಸಹಾಯವಾಣಿಗಳಾಗಿದ್ದು, ಈ ಮೂಲಕ ಸಂಪರ್ಕಿಸಿ ಪ್ರವಾಹಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.