ನವದೆಹಲಿ: ಕಾವೇರಿ ನೀರು (Cauvery Issue) ಹರಿಸಲು ಒತ್ತಡ ಹೇರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡಿಗೆ ಕಾನೂನು ಮಾರ್ಗದಲ್ಲೇ ತಿರುಗೇಟು ನೀಡಲು ಕರ್ನಾಟಕ (Karnataka) ಪ್ರಯತ್ನ ಆರಂಭಿಸಿದೆ. ಬಾಕಿ ನೀರು ಹರಿಸುವಂತೆ ತಮಿಳುನಾಡು (Tamil Nadu) ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಅನುಮತಿ ನೀಡುವಂತೆ ಕರ್ನಾಟಕ ಸಹ ಅರ್ಜಿ ಸಲ್ಲಿಸಿದೆ.
ಈ ಎರಡು ಅರ್ಜಿಗಳನ್ನು ಸೋಮವಾರ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಲಾಯಿತು. ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು. ಕರ್ನಾಟಕದ ಅರ್ಜಿಯನ್ನು ಪರಿಗಣಿಸಬೇಕು ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ಮನವಿ ಮಾಡಿದರು. ಎರಡು ಬದಿಯ ಮನವಿ ಆಲಿಸಿ ಪ್ರತ್ಯೇಕ ಪೀಠ ರಚಿಸುವುದಾಗಿ ಸಿಜೆಐ ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತ ಭೀತಿ; ವಲಸಿಗರ ಜೊತೆ ಸಮಾಲೋಚನೆ ನಡೆಸಲು ಬಿಎಸ್‌ವೈಗೆ ತಾಕೀತು
Advertisement
Advertisement
ಜೂನ್, ಜುಲೈ ನೀರು ಬಿಡದೇ ಕರ್ನಾಟಕ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಅಗಸ್ಟ್ ತಿಂಗಳ ನೀರು ಸೇರಿಕೊಳ್ಳಲಿದೆ. ನಿಗದಿತ ಪ್ರಮಾಣದಲ್ಲಿ ನೀರು ಬಿಡುತ್ತಿಲ್ಲ. ಸಂಕಷ್ಟ ಸೂತ್ರವನ್ನು ಕರ್ನಾಟಕ ಪರಿಗಣಿಸುತ್ತಿಲ್ಲ. ಈ ಹಿನ್ನಲೆ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
Advertisement
Advertisement
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಬೇಕು ಎಂದು ಕರ್ನಾಟಕ ಮನವಿ ಮಾಡಿದೆ. ಜೂನ್, ಜುಲೈ, ಆಗಸ್ಟ್ ನಲ್ಲಿ 85 ಟಿಎಂಸಿ ನೀರು ಹರಿಸಬೇಕು. ಆದರೆ 42% ಮಳೆ ಕೊರತೆ ಹಿನ್ನಲೆ 19.6% ನೀರು ಹರಿಸಲು ಮಾತ್ರ ಕರ್ನಾಟಕಕ್ಕೆ ಸಾಧ್ಯವಾಗಿದೆ. ಈ ಸಮಸ್ಯೆಗೆ ಮೇಕೆದಾಟು ಪರಿಹಾರವಾಗಿದೆ. ಹೆಚ್ಚುವರಿ ನೀರನ್ನು ಮೇಕೆದಾಟಿನಲ್ಲಿ ಸಂಗ್ರಹ ಮಾಡಬಹುದು. ಸಂಕಷ್ಟದ ಸಮಯದಲ್ಲಿ ಇದು ಬಳಕೆಗೆ ಬರಲಿದೆ. ಈ ಹಿನ್ನಲೆಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.
ತಮಿಳುನಾಡು ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಈಗಾಗಲೇ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. ಈಗ ಕರ್ನಾಟಕ ನೀರಿನ ಕೊರತೆ, ತಮಿಳುನಾಡಿನ ಒತ್ತಡವನ್ನೇ ಮುಂದಿಟ್ಟುಕೊಂಡು ಮೇಕೆದಾಟಿಗೆ ಆದ್ಯತೆ ಕೊಡಿಸಲು ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ: ಸ್ಪಂದನಾ ನಿಧನ : ವಿಜಯ ರಾಘವೇಂದ್ರ ನಟನೆ ‘ಕದ್ದ ಚಿತ್ರ’ ರಿಲೀಸ್ ಮುಂದಕ್ಕೆ
Web Stories