ಬೀದರ್ : ಕಾವೇರಿಗಾಗಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದರೂ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸದ್ಯಕ್ಕೆ ಗಡಿ ಜಿಲ್ಲೆಯಲ್ಲಿ ಕಾವೇರಿ ಬಂದ್ ಬಿಸಿ ತಟ್ಟದೇ ಪ್ರತಿಭಟನೆಗೆ (Protest) ಮಾತ್ರ ಕರ್ನಾಟಕ ಬಂದ್ ಸೀಮಿತವಾಗಿದೆ. ಸಾರಿಗೆ, ಆಟೋ ಸಂಚಾರ, ಅಂಗಡಿ – ಮುಗ್ಗಟ್ಟು, ವ್ಯಾಪಾರ, ವಹಿವಾಟು ಸೇರಿದಂತೆ ಜನ ಜೀವನ ಎಂದಿನಂತೆ ನಡೆಯುತ್ತಿದೆ.
ಕನ್ನಡ ಪರ, ರೈತ ಪರ, ದಲಿತ ಪರ ಸಂಘಟನೆಗಳು ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗ ಮಾಡಿ ಮನವಿ ಸಲ್ಲಿಸಲಿವೆ. ಹೀಗಾಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಇದನ್ನೂ ಓದಿ: ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್ ಮಾಡಲು ಹೊರಟಿದೆ : ವಾಟಾಳ್ ಆಕ್ರೋಶ
Web Stories