ಮಂಡ್ಯ: ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧನಿ ಎತ್ತದಿದ್ದರೇ ಬದುಕಿದ್ದೂ ಸತ್ತಂತೆ ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ (Cauvery Protest) ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೇ ಬದುಕಿದ್ದೂ ಸತ್ತಂತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟದ ಕಿಚ್ಚು; ಬಾಯಿಗೆ ಮಣ್ಣು ಹಾಕಿಕೊಂಡು ಸರ್ಕಾರದ ವಿರುದ್ಧ ರೈತರ ಆಕ್ರೋಶ
Advertisement
Advertisement
`ನನ್ನ ನೀರು-ನನ್ನ ಹಕ್ಕು’ ಅಂತ ಪ್ರತಿಭಟನೆ ಮಾಡಿದವರಿಂದ ನಮಗೆ ಅನ್ಯಾಯವಾಗಲ್ಲ ಅಂದುಕೊಂಡಿದ್ದೇವು. ತಮಿಳುನಾಡು ಕೇಳುವ ಮುನ್ನವೇ ನೀರು ಯಾಕೆ ಬಿಟ್ಟರು? ವಾಸ್ತವ ಸ್ಥಿತಿಯನ್ನ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ಹೋರಾಟ ಮಾಡಬೇಕಾದವರು ಮಂಡ್ಯದ ಜನ ಮಾತ್ರವಲ್ಲ. ಬೆಂಗಳೂರಿನ ಜನ (Bengaluru People) ಏನು ಮಾಡುತ್ತಿದ್ದಾರೆ? ಇದು ಸರ್ಕಾರದ ಅಸಹಾಯಕತೆಯೋ ಅಥವಾ ತಮಿಳುನಾಡು ಜೊತೆ ಸೇರಿ ಬೆಂಗಳೂರು ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವುದೋ ಗೊತ್ತಿಲ್ಲ. ಆದ್ರೆ ರಾಜಕೀಯ ಸಂಬಂಧಕ್ಕೆ ರೈತರನ್ನು ಸರ್ಕಾರ ಬಲಿ ಕೊಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಅಧಿಕಾರದಲ್ಲಿ ಇದ್ದಾಗಲೂ ಗೂಂಡಾ, ದಾಷ್ಟ್ಯ ಪ್ರದರ್ಶಿಸಬಾರದು. ದಾಷ್ಯ ಪ್ರದರ್ಶನ ಅಧಿಕಾರದಲ್ಲಿ ಇದ್ದವರಿಗೆ ಇರಬಾರದು. ಗೂಂಡಾತನ, ದಾಷ್ಟ್ಯತನ ಪ್ರದರ್ಶಿಸುವವರಿಗೆ ಈ ನಾಡಿನ ಜನ ಮದ್ದು ಅರೆದಿದ್ದಾರೆ ಅದು ನೆನಪಿರಲಿ. ನೀರು ಬಿಡಲ್ಲ ಅಂತಾ ಸರ್ಕಾರ ನಿರ್ಣಯ ತೆಗೆದುಕೊಳ್ಳಿ ಅದು ಏನಾಗುತ್ತದೋ ಆಗಲಿ, ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಸರ್ಕಾರಕ್ಕೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ಕಾವೇರಿ ನದಿ ನೀರಿನ ವಿಷಯದಲ್ಲಿ ನಾವು ಮೇಲ್ಮನವಿ ಸಲ್ಲಿಸಬೇಕು: ಬಿಎಸ್‍ವೈ
ಇದೇ ವೇಳೆ ಜೆಡಿಎಸ್ ಮುಖಂಡ ಕೆ.ಟಿ ಶ್ರೀಕಂಠೇಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ತಮಿಳುನಾಡಿಗೂ ಸೂಟ್‌ಕೇಸ್ ಸಂಬಂಧವಿದೆ. ಅವರ ಚುನಾವಣೆಗೆ ಇವರು ಸೂಟ್‌ಕೇಸ್ ಕೊಟ್ಟಿದ್ದರು. ಇವರ ಚುನಾವಣೆಗೆ ಅವರು ಸೂಟ್‌ಕೇಸ್ ಕೊಟ್ಟಿದ್ದರು. ಸೂಟ್‌ಕೇಸ್ ಸಂಬಂಧದಲ್ಲೇ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಲಿ. ಪ್ರಧಾನಿಗಳು ತಮಿಳುನಾಡು ಸರ್ಕಾರಕ್ಕೆ ಬುದ್ಧಿ ಹೇಳಿದರೆ ಕೇಳುತ್ತಾರಾ? ಸೋನಿಯಾಗಾಂಧಿ ಹೇಳಿದ್ರೆ ತಮಿಳುನಾಡು ಸರ್ಕಾರ ಕೇಳುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Web Stories