ಬೀಜಿಂಗ್: ಟ್ರಾಫಿಕ್ ಸಿಗ್ನಲ್‍ನಿಂದಾಗಿ ನಿಂತಿದ್ದ ಕಾರು ಸಿಗರೇಟ್‍ನಿಂದಾಗಿ ಸುಟ್ಟುಹೋದ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಯೆಝೆಯಾಂಗ್ ಪ್ರಾಂತ್ಯದ ಯೆವಿಯ ವೃತ್ತ ಒಂದರಲ್ಲಿ ನಿಂತಿದ್ದ ಕೆಂಪು ಕಾರಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಸೇವನೆ ಮಾಡಿದ್ದ ಪರಿಣಾಮ ಕಾರಿಗೆ ಬೆಂಕಿ ತಗುಲಿದೆ. ಪ್ರಾರಂಭದಲ್ಲಿ ಪ್ರಯಾಣಿಕರು ಕುಳಿತ ಜಾಗದಿಂದ ಕಾಣಿಸಿಕೊಂಡ ಹೊಗೆ ನಂತರ ಇಡಿ ಕಾರನ್ನು ದಟ್ಟವಾಗಿ ಆವರಿಸಿಕೊಂಡಿದೆ.
Advertisement
ಈ ವೇಳೆ ಜಾಗೃತರಾದ ಹಿಂಬದಿ ಪ್ರಯಾಣಿಕರು ಹೊರಬಂದು ಬೆಂಕಿ ಎಲ್ಲಿ ಹತ್ತಿದೆ ಎಂದು ಪರಿಶೀಲಿಸಲು ಮುಂದಾಗಿದ್ದಾರೆ. ಅವರಲ್ಲಿ ಒಬ್ಬ ಡಿಕ್ಕಿ ತೆರೆಯುತ್ತಿದ್ದಂತೆ ಅಲ್ಲಿದ್ದ ಪಟಾಕಿಗಳು ಸಿಡಿಯುತ್ತ ಹೊರ ಬಂದವು. ಕಾರಿನಲ್ಲಿ ಮತ್ತಷ್ಟು ದಟ್ಟವಾಗಿ ಹೊಗೆ ಆವರಿಕೊಂಡಿದ್ದರಿಂದ ಮುಂಬದಿ ಪ್ರಯಾಣಿಕ ಹಾಗೂ ಚಾಲಕ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳು ಸಂಭವಿಸಿಲ್ಲ.
Advertisement
ಕಾರಿನಲ್ಲಿ ಸಿಗರೇಟ್ ಸೇವನೆ ಮಾಡಿದ್ದರಿಂದಲೇ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ. ಕಾರಿನ ಹಿಂಬದಿಯಲ್ಲಿದ್ದ ವಸ್ತುಗಳು ಹಾಗೂ ಆಸನಗಳು ಸುಟ್ಟಿರುವುದನ್ನು ಕಾಣಬಹುದಾಗಿದೆ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಾರು ನಡು ರಸ್ತೆಯಲ್ಲಿ ಉರಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.