ಡೆಹ್ರಾಡೂನ್: 3 ದಿನದ ಮಗುವಿನ ಅಳು ಕೇಳಿ ಕೋಪಗೊಂಡು ಅಟೆಂಡರ್‍ವೊಬ್ಬ ಮಗುವಿನ ಕಾಲನ್ನ ಮುರಿದಿರೋ ಘಟನೆ ಉತ್ತರಾಖಂಡ್‍ನ ರೂರ್ಕಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಜನವರಿ 25ರಂದು ಜನಿಸಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಜನವರಿ 28ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನ ಐಸಿಯುನಲ್ಲಿ ಇರಿಸಲಾಗಿತ್ತು. ಅಲ್ಲೇ ನಿದ್ದೆಗೆ ಜಾರಿದ್ದ ಅಟೆಂಡರ್‍ಗೆ ಮಗುವಿನ ಅಳು ಕಿರಿಕಿರಿ ಮಾಡಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಆತ ಹಾಸಿಗೆ ಬಳಿ ಬಂದು ಮಗುವಿನ ಕಾಲನ್ನು ಜೋರಾಗಿ ಎಳೆದು ಡೈಪರ್ ಬದಲಿಸಿದ್ದಾನೆ. ನಂತರ ಮಗು ಅಳುತ್ತಿದ್ದರೂ ಈತ ಮಾತ್ರ ಎಂದಿನಂತೆ ತನ್ನ ಕೆಲಸ ಮುಂದುವರೆಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಮಗುವನ್ನ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದಾಗ ಅದರ ಕಾಲಿನ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.
Advertisement
ಅಟೆಂಡರ್ ಇಡೀ ರತ್ರಿ ನನ್ನ ಮಗುವಿಗೆ ಕಿರುಕುಳ ನೀಡಿದ್ದಾನೆ, ಕಾಲನ್ನೂ ಮುರಿದಿದ್ದಾನೆ ಎಂದು ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.