ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರಿ ಅಧಿಕಾರಿಯೊಬ್ಬ ಕುವೈತ್ ಅಧಿಕಾರಿಯೊಬ್ಬರ ಪರ್ಸನ್ನು ಕದ್ದು ಈಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಕೆಲ ದಿನಗಳ ಹಿಂದೆ ಕುವೈತ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಮಾತುಕತೆಗಾಗಿ ಆಗಮಿಸಿದ್ದರು. ಈ ವೇಳೆ ಅಧಿಕಾರಿಯೊಬ್ಬರ ಪರ್ಸ್ ಕಳವು ಆಗಿತ್ತು. ಟೇಬಲ್ ಮೇಲಿಟ್ಟಿದ್ದ ಪಸ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಯೋಜಕರಿಗೆ ಅಧಿಕಾರಿ ದೂರು ನೀಡಿದ್ದರು.
Advertisement
ದೂರು ನೀಡಿದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಸಭೆಗೆ ನಿಯೋಜನೆಗೊಂಡಿದ್ದ ಎಲ್ಲ ಸಿಬ್ಬಂದಿಯನ್ನು ತಪಾಸಣೆ ನಡೆಸಿದ್ದಾರೆ. ತಪಾಸಣೆ ನಡೆಸಿದರೂ ಪರ್ಸ್ ಮಾತ್ರ ಸಿಗಲೇ ಇಲ್ಲ. ಕೊನೆಗೆ ಸಭೆ ನಡೆದ ಸಭಾಂಗಣದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.
Advertisement
Advertisement
ಸಿಸಿಟಿವಿ ವಿಡಿಯೋ ಪರಿಶೀಲನೆ ವೇಳೆ ಪಾಕ್ ಅಧಿಕಾರಿಯ ಬಣ್ಣ ಬಯಲಾಗಿದೆ. ಸಭೆ ನಡೆದ ಕೊಠಡಿಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಅಧಿಕಾರಿ ಮೆಲ್ಲನೇ ಪ್ರವೇಶಿಸಿ ಟೇಬಲ್ ಮೇಲಿದ್ದ ಪರ್ಸನ್ನು ಕದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಈ ವಿಡಿಯೋವನ್ನು ಪಾಕ್‍ನ ಪರ್ತಕರ್ತ ಒಮರ್ ಆರ್ ಖುರೇಷಿ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದು ಈಗ ವೈರಲ್ ಆಗಿದೆ. ಪಾಕ್ ಸರ್ಕಾರ ಈ ಘಟನೆ ಕುರಿತು ಔಪಚಾರಿಕವಾಗಿ ಕ್ಷಮೆಯಾಚಿಸಿದ್ದು, ಅಧಿಕಾರಿಯಿಂದ ಪರ್ಸ್ ವಶಕ್ಕೆ ಪಡೆದು ಕುವೈತ್ ಅಧಿಕಾರಿಗೆ ವಾಪಸ್ ಮಾಡಲಾಗಿದೆ. ಅಧಿಕಾರಿಯನ್ನು ಬಂಧಿಸಲಾಗಿದ್ದು, ತನಿಖೆಗೆ ಆದೇಶ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಉಗ್ರರಿಗೆ ಸಹಕಾರ ನೀಡಿ ಶಾಂತಿ ಮಾತುಕತೆಯ ನಾಟಕ ಆಡುತ್ತಿರುವ ಪಾಕಿಸ್ತಾನದ ಎರಡು ಮುಖವನ್ನು ಬಯಲು ಮಾಡಿ ಮಾನ ಹರಾಜು ಹಾಕಿದ್ದರು. ಈಗ ಅಧಿಕಾರಿಯಿಂದಲೇ ಪಾಕ್ ಮಾನ ವಿಶ್ವಮಟ್ಟದಲ್ಲೇ ಹರಾಜಾಗಿದೆ.
Grade 20 GoP officer stealing a Kuwaiti official's wallet – the official was part of a visiting delegation which had come to meet the PM pic.twitter.com/axODYL3SaZ
— omar r quraishi (@omar_quraishi) September 28, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv