ಶಿವಮೊಗ್ಗ: ತರಗತಿಗೆ ಚಕ್ಕರ್ ಹೊಡೆಯಲು ಮಲೆನಾಡಿನ ವಿದ್ಯಾರ್ಥಿನಿಯರು ಕಾಂಪೌಂಡ್ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜಿಲ್ಲೆಯ ಹೊಸನಗರ ಪಟ್ಟಣದಲ್ಲಿರುವ ಕೊಡಚಾದ್ರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಈ ರೀತಿ ಸಾಹಸ ಮಾಡಿದ್ದಾರೆ. ಕಾಲೇಜು ಬೆಳಗ್ಗೆ 10-30ರಿಂದ ಸಂಜೆ 4.30ರ ವರೆಗೆ ನಡೆಯುತ್ತದೆ. ಆದರೆ ಮಧ್ಯಾಹ್ನದ ನಂತರ ತರಗತಿಗಳು ಖಾಲಿ ಖಾಲಿ ಆಗುತ್ತವೆ. ಇದಕ್ಕೆ ಉಪಾಯ ಕಂಡುಹಿಡಿದ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಡಾ.ಮಾರ್ಷಲ್ ಸರಾಮ್ ಅವರು ಕಾಲೇಜಿನ ಗೇಟ್‍ಗೆ ಬೀಗ ಹಾಕಿದ್ದಾರೆ.
Advertisement
Advertisement
ಗೇಟ್‍ಗೆ ಬೀಗ ಹಾಕಿದ್ದರಿಂದ ಕೆಲವು ವಿದ್ಯಾರ್ಥಿನಿಯರು, ಕಾಲೇಜು ಅವಧಿ ಮುಗಿಯುವುದಕ್ಕೂ ಮೊದಲೇ ಕಾಂಪೌಂಡ್ ಹಾರಿ ಹೋಗುತ್ತಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
ಕಾಲೇಜಿನ ಪ್ರಾಚಾರ್ಯ ಡಾ.ಮಾರ್ಷಲ್ ಸರಾಮ್ 995 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇದ್ದಾರೆ. ಕಳೆದ 15 ದಿನಗಳಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಭಾರೀ ಇಳಿಕೆಯಾಗಿತ್ತು. ಮೊದಲನೇ ಅವಧಿಯ ಕ್ಲಾಸ್‍ಗೆ ಇದ್ದ ವಿದ್ಯಾರ್ಥಿಗಳು ಎರಡನೇ ಅವಧಿಯ ವೇಳೆ ಇರುತ್ತಿರಲಿಲ್ಲ. ಇದರಿಂದಾಗಿ ಮಧ್ಯಾಹ್ನ ಬೆರಳೆಣಿಕೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇರುತಿದ್ದರು. ಇದನ್ನು ಸರಿಪಡಿಸಲು ಕಾಲೇಜಿನ ಮುಖ್ಯ ಗೇಟ್‍ಗೆ ಕೀಲಿ ಹಾಕಲಾಗಿತ್ತು. ಈ ಕುರಿತು ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ನೀಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮಾರ್ಷಲ್ ಸರಾಮ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
ನಿಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನವಾಗುತ್ತಿದ್ದಂತೆ ನಗರದಲ್ಲಿ ಸುತ್ತಾಡುತ್ತಾರೆ ಅಂತ ಅನೇಕರು ದೂರು ನೀಡಿದ್ದಾರೆ. ಕಾಂಪೌಂಡ್ ಹಾಕಿದ್ದಕ್ಕೆ ನಮಗೆ ತೊಂದರೆ ಆಗುತ್ತಿದೆ ಅಂತ ಒಂದು ಬಾರಿಯೂ ವಿದ್ಯಾರ್ಥಿನಿಯರು ದೂರು ನೀಡಿಲ್ಲ. ಹೀಗಿರುವಾಗ ಯಾಕೆ ಹೀಗೆ ಮಾಡಿದ್ದಾರೆ ಎನ್ನುವ ಕುರಿತು ವಿಚಾರಿಸಿ ಮುಂದಿನ ತಿರ್ಮಾನ ಕೈಕೊಳ್ಳಲಾಗುತ್ತದೆ ಎಂದು ಹೇಳಿದರು.
https://www.youtube.com/watch?v=4dAdH_-gARo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv