ವಾಷಿಂಗ್ಟನ್: ಕಳ್ಳರು ಎಟಿಎಂ ಒಡೆದು ಹಣ ಕದ್ದಿರುವ ಬಗ್ಗೆ ಕೇಳಿದ್ದೀವಿ. ಆದ್ರೆ ಖದೀಮರು ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.
ಇಲ್ಲಿನ ಅರ್ಕಾನ್ಸಾಸ್‍ನಲ್ಲಿ ಕಳ್ಳರು ಫೋರ್ಕ್‍ಲಿಫ್ಟ್(ಭಾರೀ ತೂಕದ ವಸ್ತುಗಳನ್ನ ಎತ್ತಲು ಬಳಸುವ ವಾಹನ) ಟ್ರಕ್‍ನಲ್ಲಿ ಬಂದು ಇಡೀ ಎಟಿಎಂ ಯಂತ್ರವನ್ನ ಅದರ ಬುಡದಿಂದ ಎಳೆದಿದ್ದಾರೆ.
Advertisement
Advertisement
ಆಗಸ್ಟ್ 16ರಂದು ಈ ಘಟನೆ ನಡೆದಿದ್ದು, ಕಾನ್‍ವಾಯ್ ಪೊಲೀಸ್ ಇಲಾಖೆ ಇದರ ಸಿಸಿಟಿವಿ ದೃಶ್ಯಾವಳಿಯನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದೆ. ಬ್ಯಾಂಕಿನ ಕಪೌಂಡ್‍ನೊಳಗೆ ಫೋರ್ಕ್‍ಲಿಫ್ಟ್ ಟ್ರಕ್ ಬಂದು ನೆಲದಿಂದ ಎಟಿಎಂ ಯಂತ್ರವನ್ನ ಮೇಲೆತ್ತಿದೆ. ನಂತರ ಕಳ್ಳರು ಎಟಿಎಂ ಯಂತ್ರವನ್ನ ಟ್ರಕ್‍ನಲ್ಲಿ ಎಳೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಫೋರ್ಕ್‍ಲಿಫ್ಟ್ ನಿಂದಾಗಿ ಬ್ಯಾಕ್ ಆವರಣದಲ್ಲಿ ಹೆಚ್ಚಿನ ಹಾನಿಯಾಗಿದೆ. ಕೆಲವು ಸೀಲಿಂಗ್ ಟೈಲ್‍ಗಳನ್ನ ಆ ಟ್ರಕ್ ಒಡೆದುಹಾಕೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
ಘಟನೆ ನಡೆದ ಮರುದಿನ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ದರೋಡೆಯಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಕದ್ದ ಎಟಿಎಂನಲ್ಲಿ ಎಷ್ಟು ಹಣವಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
Advertisement
ಆರೋಪಿಗಳು ಕಟ್ಟಡ ನಿರ್ಮಾಣ ಕೆಲಸಗಾರರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
https://www.youtube.com/watch?v=WP3VHIWL784