ಲಕ್ನೋ: ನೈತಿಕ ಪೋಲಿಸ್‍ಗಿರಿ ಹೆಸರಲ್ಲಿ ಮೂವರು ಯುವಕರ ತಂಡ ಯುವಕ ಯುವತಿಯನ್ನು ಮನಬಂದಂತೆ ಥಳಿಸಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ಮಹಾರಾಜ್‍ಗಂಜ್‍ನಲ್ಲಿ ನಡೆದಿದೆ.
ಯುವಕ ಯುವತಿ ಸೌದೆ ತರಲು ಹೋಗಿದ್ದು, ಕಾಡಿನಲ್ಲಿ ಅಲೆದಡುತ್ತಿದ್ದ ವೇಳೆ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ವರದಿಗಳ ಪ್ರಕಾರ ಯುವಕ ಯುವತಿಯನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಅಸಭ್ಯ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಡುವಂತೆ ಹೇಳಲಾಗಿತ್ತು ಎನ್ನಲಾಗಿದೆ.
Advertisement
Maharajganj (UP): A boy and a girl beaten up by goons in the name of moral policing; case registered, two people arrested pic.twitter.com/8svuqSOnp7
— ANI UP/Uttarakhand (@ANINewsUP) July 20, 2017
Advertisement
ಕಿಡಿಗೇಡಿಗಳು ಯುವಕ ಯುವತಿಯನ್ನ ನೆಲದ ಮೇಲೆ ಮಲಗುವಂತೆ ಮಾಡಿ ಕೋಲಿನಿಂದ ಮನಬಂದಂತೆ ಥಳಿಸಿದ್ದರೆ. ಅವರಲ್ಲೊಬ್ಬ ಯುವತಿಯನ್ನ ಅಸಭ್ಯವಾಗಿ ಮುಟ್ಟಿ ಆಕೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಯುವಕನಿಗೂ ಕೂಡ ಕೋಲಿನಿಂದ ಜೋರಾಗಿ ಹೊಡೆದಿದ್ದಾರೆ. ಆ ಇಬ್ಬರೂ ಎಷ್ಟು ಬೇಡಿಕೊಂಡರೂ ಮನಬಂದಂತೆ ಥಳಿಸಿದ್ದಾರೆ. ಇದನ್ನ ಮತ್ತೊಬ್ಬ ತನ್ನ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Advertisement
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.