ಮುಂಬೈ: ಸಾಮಾನ್ಯವಾಗಿ ಚಿರತೆಗಳು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತವೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಅದನ್ನು ಸ್ಥಳದಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ.
ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ (ಎಸ್‍ಜಿಎನ್‍ಪಿ) ಸಮೀಪದ ಇರುವ ದಿಂದೋಶಿ ಎಂಬಲ್ಲಿ ಮಂಗಳವಾರ ರಾತ್ರಿ ನಾಯಿಗಳು ಚಿರತೆಯನ್ನು ಓಡಿಸುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಜನವರಿ ಕೊನೆಯ ವಾರ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಚಿರತೆ ರಸ್ತೆಯನ್ನು ದಾಟುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿತ್ತು. ಆದರೆ ಮನೆ ಹತ್ತಿರ ಇದೂವರೆಗೆ ಬಂದಿರಲಿಲ್ಲ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.
Advertisement
2014ರ ಡಿಸೆಂಬರ್‍ನಿಂದ ಏಪ್ರಿಲ್ 2015ರ ವರೆಗೆ ವೈಲ್ಡ್ ಲೈಫ್ ಇನ್‍ಸ್ಟಿಟ್ಯೂಟ್ ಜೊತೆ ಎಸ್‍ಜಿಎನ್‍ಪಿ ಅಧ್ಯಯನ ನಡೆಸಿದ್ದು, ಈ ವೇಳೆ 140 ಚದರ. ಕಿ.ಮೀ ವ್ಯಾಪ್ತಿಯಲ್ಲಿ 35 ಚಿರತೆಗಳು ವಿಹರಿಸುತ್ತಿರುವುದು ವಿಚಾರ ಬೆಳಕಿಗೆ ಬಂದಿತ್ತು.
Advertisement
2012ರಲ್ಲಿ ಚಿರತೆಯೊಂದು ಅಪಾರ್ಟ್‍ಮೆಂಟ್‍ಗೆ ನುಗ್ಗಿ ನಾಯಿಯ ಮೇಲೆ ದಾಳಿ ಮಾಡಿತ್ತು. ಈ ಘಟನೆಯ ಬಳಿಕ ಯಾವೊಂದು ಚಿರತೆ ಈ ಸ್ಥಳಕ್ಕೆ ಬಂದಿಲ್ಲ ಎಂದು ಮತ್ತೊಬ್ಬ ಸ್ಥಳಿಯ ನಿವಾಸಿ ತಿಳಿಸಿದ್ದಾರೆ.