ಚೆನ್ನೈ: ದಿನೇ ದಿನೇ ಎಲ್ಲೆಡೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕಳ್ಳರನ್ನು ಪತ್ತೆ ಹಚ್ಚಲು ಸಲುವಾಗಿ ಹಲವಾರು ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ನಡುವೆ ಕಳ್ಳತನ ಮಾಡಲು ಬಂದಿದದ್ದ ಖತರ್ನಾಕ್ ಖದೀಮರು ಸಿಸಿ ಕ್ಯಾಮೆರಾಗೆ ಚುಂಬಿಸಿದ್ದು, ಇದೀಗ ಈ ವೀಡಿಯೋ ಮೂಲಕ ಕಳ್ಳರನ್ನು ಪತ್ತೆ ಹಚ್ಚುವಂತೆ ಸ್ಥಳೀಯ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದಾರೆ.
Advertisement
ಹೌದು, ತಮಿಳುನಾಡಿನ ಚೆನ್ನೈನ ರಾಮ್ ನಗರದ ನಿವಾಸಿಗಳು ತಮ್ಮ ಅಪಾರ್ಟ್‍ಮೆಂಟ್‍ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗೆ ಮೂವರು ವ್ಯಕ್ತಿಗಳು ಚುಂಬಿಸಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ
Advertisement
This happens in our flat,some guys came in and doing these things we filed complaint to police station but if you spread these video,somewhere will reachandcan get these guys@chennaipolice_ @behindwoods @mkstalin @behindwoods @galattadotcom @polimernews @ThanthiTV @sunnewstamil pic.twitter.com/cTvMtRraMp
— Thulasi Rajesh (@thulasi_rajesh) August 6, 2022
Advertisement
ಈ ಪ್ರದೇಶದಲ್ಲಿರುವ ಅಪಾರ್ಟ್‍ಮೆಂಟ್‍ಗಳನ್ನೇ ಕಳ್ಳತನ ಮಾಡಲು ದುಷ್ಕರ್ಮಿಗಳು ಟಾರ್ಗೆಟ್ ಮಾಡಿಕೊಂಡಿದ್ದು, ಕಳ್ಳರ ಭೀತಿಯಿಂದ ಇಲ್ಲಿನ ನಿವಾಸಿಗಳು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸೋಮವಾರ ಅಪಾರ್ಟ್‍ಮೆಂಟ್ ಬಳಿ ನಿಲ್ಲಿಸಿದ್ದ ತಮ್ಮ ವಾಹನ ಕಳ್ಳತನವಾಗಿರುವ ಬಗ್ಗೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ನಂತರ ಈ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರು ರಾಮ್ ನಗರದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಮೂವರು ಖದೀಮರು ಕ್ಯಾಮೆರಾಗೆ ಚುಂಬಿಸುತ್ತಿರುವುದನ್ನು ನೋಡಿದ್ದಾರೆ.ಇದನ್ನೂ ಓದಿ: ಗಣೇಶೋತ್ಸವ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಜಮೀರ್‌ಗೆ ಶ್ರೀರಾಮ ಸೇನೆ ಸವಾಲ್
ಈ ವೀಡಿಯೋವನ್ನು ತುಳಸಿ ರಾಜೇಶ್ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಮತ್ತು ಸಾರ್ವಜನಿಕರನ್ನು ಮನವಿ ಮಾಡಿದ್ದಾರೆ. ವೀಡಿಯೋದಲ್ಲಿ ಮೂವರು ವ್ಯಕ್ತಿಗಳು ಕಾಂಪೌಂಡ್ ಗೋಡೆಯ ಮೇಲೆ ನಡೆದುಕೊಂಡು ಬಂದು ಕ್ಯಾಮೆರಾ ಲೆನ್ಸ್‌ಗೆ ಪದೇ, ಪದೇ ಚುಂಬಿಸಿರುದನ್ನು ಕಾಣಬಹುದಾಗಿದೆ. 39 ಸೆಕೆಂಡುಗಳ ವೀಡಿಯೊ ವೈರಲ್ ಆದ ನಂತರ, ಚೆನ್ನೈ ಪೊಲೀಸರು ಘಟನೆ ಸಂಬಂಧ ತನಿಖೆಯನ್ನು ಚುರುಕುಗೊಳಿಸಿದ್ದಾರೆ.