ಹಾಸನ: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವಿಚಾರಕ್ಕೆ ನಡೆದಿರುವ ಗಲಾಟೆ ಹಿನ್ನೆಲೆಯಲ್ಲಿ ನಾಲ್ವರು ಭಜರಂಗದಳದ (Bajrang Dal) ಕಾರ್ಯಕರ್ತರು ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ಹಾಸನ (Hassana) ಗ್ರಾಮಾಂತರ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿವೆ.
Advertisement
ಅ.26 ರಂದು ಬೆಳಗ್ಗೆ ಕಣಗಲು ಮನೆ ಸಮೀಪ ಹೇಮಾವತಿ ನದಿ ದಡದ ಅರಣ್ಯ ಜಾಗದಲ್ಲಿ ಗೋಮಾಂಸ ಮಾರಾಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪಿಎಸ್‍ಐ ಬಸವರಾಜು ಮತ್ತವರ ತಂಡ ಸ್ಥಳಕ್ಕೆ ದೌಡಾಯಿಸಿತು. ಈ ವೇಳೆ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಹಾಲೇ ಬೇಲೂರು ಗ್ರಾಮದ ಚಂದ್ರ ಅಲಿಯಾಸ್ ಕುಳ್ಳ, ಲೋಕೇಶ್ ಎಂಬುವವರನ್ನು ಬಂಧಿಸಿದ್ದರು. ಜಗಳದಲ್ಲಿ ಲೋಕೇಶ್‍ನ ತಲೆಗೆ ಪೆಟ್ಟಾಗಿದ್ದು, ನಂತರ ಇಬ್ಬರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಜುಟ್ಟು ಹಿಡಿದು ರೋಗಿಯನ್ನು ಬೆಡ್ ಮೇಲೆ ಎಳೆದೊಯ್ದ ನರ್ಸ್ – ನಡೆದಿದ್ದೇನು ಗೊತ್ತಾ?
Advertisement
Advertisement
ಲೋಕೇಶ್ ನೀಡಿದ ಹೇಳಿಕೆಯಲ್ಲಿ ದೀಪಾವಳಿ ದಿನದಂದು ಹಾಲೇ ಬೇಲೂರಿನ ಚಂದ್ರಶೆಟ್ಟಿ ಎಂಬುವರಿಂದ 11 ಸಾವಿರಕ್ಕೆ ಹಸುವೊಂದನ್ನು ಖರೀದಿಸಿ, ಅದನ್ನು ಕೊಯ್ದು ಮಾರಾಟ ಮಾಡುವ ಉದ್ದೇಶದಿಂದ ಅ.26 ರಂದು ಅರಣ್ಯದ ಹತ್ತಿರ ಕಡಿಯುತ್ತಿದ್ದರು. ಮಳಲಿ ಗ್ರಾಮದ ಭಜರಂಗದಳದ ರವಿ ಅಲಿಯಾಸ್ ಚಾರ್ಲಿ, ಶಿವು ಅಲಿಯಾಸ್ ಜಿಪ್ಪಿ ಶಿವು, ಶ್ರೀಜಿತ್, ರವಿ ಮತ್ತು ಇತರರು ಬಂದು, ನಿಮಗೆ ದನ ಕಡಿಯಲು ಪರವಾನಗಿ ಇದೆಯೇ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಅಲ್ಲೇ ಇದ್ದ ದೊಣ್ಣೆಯಿಂದ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಚಂದ್ರ ಅವರ ಬೈಕ್‍ನ್ನು ಕಲ್ಲಿನಿಂದ ಜಖಂಗೊಳಿಸಿದರು ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ದೂರು ಆಧರಿಸಿ ಮಳಲಿ ಗ್ರಾಮದ ರವಿ ಅಲಿಯಾಸ್ ಚಾರ್ಲಿ, ಬಾಸರವಳ್ಳಿ ಗ್ರಾಮದ ಶಿವು ಅಲಿಯಾಸ್ ಜಿಪ್ಪಿ ಶಿವು, ಹೆಬ್ಬಸಾಲೆ ಗ್ರಾಮದ ಶ್ರೀಜಿತ್‍ಗೌಡ ಮತ್ತು ರವಿ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಎಸ್‍ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್ ಸವಾರನೊಂದಿಗೆ ಜಗಳ – ಸಿಟ್ಟಿನಿಂದ ಜನರ ಮೇಲೆ ಕಾರು ಹರಿಸಿದ