ಜೈಪುರ: ರಾಜಾಸ್ಥಾನದ 16 ಜಿಲ್ಲೆಗಳು ಹಾಗೂ ಗುಜರಾತಿನ 20 ಜಿಲ್ಲೆಗಳಲ್ಲಿ ಹಸುಗಳಲ್ಲಿ ಲಿಂಪಿ ಚಮರೋಗ (LSD) ವೈರಸ್ ಕಾಣಿಸಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಹಸುಗಳ ಮಾರಣಹೋಮ ನಡೆದಿದೆ.
ಲಿಂಪಿ ವೈರಸ್ (ಲಿಂಪಿ ಚರ್ಮರೋಗ) ಹರಡುತ್ತಿರುವ ಹಿನ್ನೆಲೆಯಲ್ಲಿ, ಸತ್ತ ದನಗಳ ಮೃತದೇಹಗಳಿಂದ ವಿಪರೀತ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಜನರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸಲು ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು
Advertisement
Advertisement
ರಾಜಾಸ್ಥಾನದ 16 ಜಿಲ್ಲೆಗಲ್ಲಿ ಲಿಂಪಿ ವೈರಸ್ ಕಾಣಿಸಿಕೊಂಡಿದ್ದು ಸುಮಾರು 4,000 ಹಸುಗಳು ಮೃತಪಟ್ಟಿವೆ. ಗುಜರಾತ್ 20 ಜಿಲ್ಲೆಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದು, 1,431 ಹಸುಗಳು ಮೃತಪಟ್ಟಿವೆ. 54,161 ಹಸುಗಳು ವೈರಸ್ ಭೀತಿ ಎದುರಿಸುತ್ತಿವೆ. ಕಾಯಿಲೆ ವಿರುದ್ಧ ಹೋರಾಡಲು ಹಸುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ 8 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.
Advertisement
ಇಲ್ಲಿನ ಜೋಧ್‌ಪುರದ ಸಮೀಪದಲ್ಲಿರುವ ಹಲವು ಹಳ್ಳಿಗಳಲ್ಲಿ ಈಗಾಗಲೇ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಲಿಂಪಿ ವೈರಸ್ ಹರಡುವಿಕೆಯಿಂದ ಹಲವಾರು ಹಸುಗಳು, ಎತ್ತುಗಳು ಮತ್ತು ಎಮ್ಮೆಗಳೂ ಸಾವನ್ನಪ್ಪಿವೆ, ಅವುಗಳನ್ನು ಹೂಳಲು ಸ್ಥಳಾವಕಾಶದ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.
Advertisement
ಮಳೆಗಾಲ ಇರುವುದರಿಂದ ಇದು ಕೃಷಿಗೆ ಸೂಕ್ತವಾದ ಸಮಯ. ಆದರೆ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಹೊರಗಿನಿಂದ ಯುವಕರನ್ನು ಕೆಲಸ ಮಾಡಲು ಕರೆಸಲಾಗುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡುತ್ತಿದ್ದಂತೆ ತಾವೂ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ಆತಂಕದಿಂದ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಹಸುವಿನ ಹಾಲನ್ನೂ ಕುಡಿಯುತ್ತಿಲ್ಲ: ಹಸುಗಳಲ್ಲಿ ಲಿಂಪಿ ವೈರಸ್ ಕಂಡುಬರುತ್ತಿರುವುದರಿಂದ ಇಲ್ಲಿನ ಜನ ಹಸುವಿನ ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ಇದರಿಂದ ಪ್ಯಾಕೆಟ್ ಹಾಲಿನ ಪೌಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಕ್ಕಳಿಗೂ ಇದನ್ನೇ ಕುಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.