– ಕ್ರೈಸ್ತರ ಜನಸಂಖ್ಯೆ 9 ಲಕ್ಷಕ್ಕೂ ಅಧಿಕ ಇದೆ
– ಕ್ರೈಸ್ತರನ್ನ 2C ಗೆ ಸೇರಿಸಲು ಆಗ್ರಹ
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಜೋಡಿತ 52 ಉಪಜಾತಿಗಳನ್ನ (Catholic Dean) ಕೈಬಿಟ್ಟಿರುವುದಕ್ಕೆ ಕ್ಯಾಥೋಲಿಕ್ ಧರ್ಮಾಧ್ಯಕ್ಷ (Catholic Pope) ಪೀಟರ್ ರಿಚರ್ಡ್ ಹಾಗೂ ಸಹಾಯಕ ಧರ್ಮಾಧ್ಯಕ್ಷ ಸತೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ʻಪಬ್ಲಿಕ್ ಟಿವಿʼಗೆ (Public TV) ಜೊತೆಗೆ ಮಾತನಾಡುತ್ತಾ, ಸಮೀಕ್ಷೆ ಪಟ್ಟಿಯಲ್ಲಿ 52 ಉಪ ಜಾತಿಗಳು ಇರೋದು ನೋಡಿ ಖುಷಿ ಆಗಿತ್ತು. ಆಮೇಲೆ ತೆಗೆದಿದ್ದು ಬೇಸರ ಆಯ್ತು. 52 ಉಪಜಾತಿಗಳನ್ನ ನಾವು ಗುರುತಿಸಿಲ್ಲ ಸರ್ಕಾರ ಗುರುತಿಸಿದ್ದು. ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಆಗಿರುತ್ತೇವೆ. ಅಲ್ಲದೇ ನಾವು ಮತಾಂತರ (Conversion) ಮಾಡಲ್ಲ, ರಾಜಕಾರಣಿಗಳು ಸುಮ್ಮನೆ ಆರೋಪ ಮಾಡಬಾರದು. ಸಮೀಕ್ಷೆಯಲ್ಲಿ ಜನ ನಿಮಗೆ ಅನಿಸಿದ್ದನ್ನ ಬರೆಸಿ ಅಂತಾ ಕರೆ ಕೊಟ್ಟಿದ್ದಾರೆ.
ಇದೇ ವೇಳೆ ಕ್ರೈಸ್ತ ಧರ್ಮಗುರುಗಳು ಮೀಸಲಾತಿ ಬೇಡಿಕೆ ಸಹ ಇಟ್ಟಿದ್ದಾರೆ. ರಾಜ್ಯದಲ್ಲಿ 9.45 ಲಕ್ಷ ಕ್ರೈಸ್ತರಿದ್ದಾರೆ ಅಂತ ಹೇಳ್ತಿದ್ದಾರೆ. ಆದ್ರೆ ನಮ್ಮ ಅಂದಾಜಿನಲ್ಲಿ ಅದಕ್ಕಿಂತಲೂ ಜಾಸ್ತಿ ಇದ್ದಾರೆ. ನಾವು ಈಗ 3C ಯಲ್ಲಿ ಇದ್ದೇವೆ. ಸಮೀಕ್ಷೆ ಮುಗಿದ ಬಳಿಕ 2C ಸೇರ್ಪಡೆ ಮಾಡಬೇಕು ಅಂತ ಒತ್ತಾಯ ಮಾಡ್ತೆವೆ ಎಂದಿದ್ದಾರೆ.
ಏಕೆಂದ್ರೆ ನಮ್ಮಲ್ಲೂ ಬಡವರು ಇದ್ದಾರೆ. 2C ಮೀಸಲಾತಿ ಕೊಡಿ ಅಂತ ಧರ್ಮಾಧ್ಯಕ್ಷರು ಸಿಎಂ ಒತ್ತಾಯ ಮಾಡೋದಾಗಿ ʻಪಬ್ಲಿಕ್ ಟಿವಿʼಗೆ ತಿಳಿಸಿದ್ದಾರೆ.